"ರಾಕ್ಷಸರನ್ನ ಗಲ್ಲಿಗೇರಿಸಿ" ; ಕನ್ಹಯ್ಯಾ ಲಾಲ್‌ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರೋಶ, ಮುಗಿಲು ಮುಟ್ಟಿದ ಆಕ್ರಂದನ

"ರಾಕ್ಷಸರನ್ನ ಗಲ್ಲಿಗೇರಿಸಿ" ; ಕನ್ಹಯ್ಯಾ ಲಾಲ್‌ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರೋಶ, ಮುಗಿಲು ಮುಟ್ಟಿದ ಆಕ್ರಂದನ

ಉದಯಪುರ : ಹಿಂದೂ ಟೈಲರ್​ ಕನ್ಹಯ್ಯ‌ ಲಾಲ್‌ ಅಂತ್ಯಕ್ರಿಯೆ ಉದಯಪುರದಲ್ಲಿಯೇ ನಡೆದಿದ್ದು, ಈ ವೇಳೆ ಕುಟುಂಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಕೊಲೆಗಡುಕರಿಗೆ ಹಿಡಿಶಪ ಹಾಕಿದ ಕುಟುಂಬಸ್ಥರು, 'ಹಂತಕರನ್ನ ಸುಮ್ಮನೆ ಬಿಡಬೇಡಿ, ಈಗಲೇ ಗಲ್ಲಿಗೇರಿಸಿ.ರಾಕ್ಷಸರಿಗೆ ಕಠಿಣ ಶಿಕ್ಷೆ ಕೊಡಿ' ಎಂದು ಕನ್ಹಯ್ಯ ನೆನೆದು ಬಿಕ್ಕಿ ಬಿಕ್ಕಿ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಅಂದ್ಹಾಗೆ, ಪ್ರವಾದಿ ಮುಹಮ್ಮದ್​ರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕಾಗಿ ರಾಜಸ್ಥಾನದಲ್ಲಿ ಹಿಂದೂ ಟೈಲರ್​ ಕನ್ಹಯ್ಯ‌ ಲಾಲ್‌ರನ್ನ ಮುಸ್ಲಿಂ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಶಿರಚ್ಛೇದದ ವಿಡಿಯೋ ಸಾಮಾಜೀಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ, ಪ್ರಧಾನಿ ಮೋದಿಗೂ ಕೊಲೆ ಬೆದರಿಕೆ ಹಾಕಿದ್ದಾರೆ.