ಶ್ರೀಅನಂತಪುರಂ ದೇವಸ್ಥಾನದ ' ಮೊಸಳೆ ಬಬಿಯಾ ' ವಿಷ್ಣು ಪಾದಕ್ಕೆ ಸೇರಿದೆ , ಆತ್ಮಕ್ಕೆ ಶಾಂತಿ ಸಿಗಲಿ: ಕಂಬನಿ ಮಿಡಿದ ಶೋಭಾ ಕರಂದ್ಲಾಜೆ

ಶ್ರೀಅನಂತಪುರಂ ದೇವಸ್ಥಾನದ ' ಮೊಸಳೆ ಬಬಿಯಾ ' ವಿಷ್ಣು ಪಾದಕ್ಕೆ ಸೇರಿದೆ , ಆತ್ಮಕ್ಕೆ ಶಾಂತಿ ಸಿಗಲಿ: ಕಂಬನಿ ಮಿಡಿದ ಶೋಭಾ ಕರಂದ್ಲಾಜೆ

ಕಾಸರಗೋಡು : ಶ್ರೀ ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ 'ಬಬಿಯಾ ಮೊಸಳೆ ನಿಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಂಬನಿ ಮಿಡಿದಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಶ್ರೀ ಅನಂತಪುರಂ ದೇವಸ್ಥಾನದ ದೇವರ ಮೊಸಳೆ ಬಬಿಯಾ ವಿಷ್ಣು ಪಾದಕ್ಕೆ ಸೇರಿದೆ. ದೈವಿಕ ಮೊಸಳೆಯು ಶ್ರೀ ಅನಂತಪದ್ಮನಾಭ ಸ್ವಾಮಿಯ ಅನ್ನ ಮತ್ತು ಬೆಲ್ಲದ ಪ್ರಸಾದವನ್ನು ಸೇವಿಸಿ 75ಕ್ಕೂ ಹೆಚ್ಚು ವರ್ಷಗಳ ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು ಮತ್ತು ದೇವಾಲಯವನ್ನು ಕಾಪಾಡಿತ್ತಿತ್ತು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಂಬನಿ ಮಿಡಿದು ಟ್ವೀಟ್​ ಮಾಡಿದ್ದಾರೆ. 

ಮೊಸಳೆ ಸುಮಾರು 75 ವರ್ಷಗಳಿಂದ ಇದೇ ಕೊಳದಲ್ಲಿದೆ ಎಂಬ ನಂಬಿಕೆ ಇದೆ. ಬಬಿಯಾದಿಂದ ಇದುವರೆಗೆ ಯಾರೂ ತೊಂದರೆಗೊಳಗಾದ ಉದಾಹರಣೆಯೇ ಇಲ್ಲ. ಪೂಜೆ ಬಳಿಕ ಅರ್ಚಕರು ಕರೆದಾಗ ಹೊರಬರುತ್ತಿದ್ದ ಬಬಿಯಾ ನೈವೇದ್ಯ ತಿಂದು ಮತ್ತೆ ನೀರಿನೊಳಗೆ ಹೋಗುತ್ತಿತ್ತು. ಪ್ರತಿದಿನ ಎರಡು ಬಾರಿ ಬಬಿಯಾ ನೈವೇದ್ಯ ಸ್ವೀಕರಿಸುತ್ತಿತ್ತು.

ಈ ಹಿಂದೆ 2019ರಲ್ಲಿ ಬಬಿಯಾ ಬದುಕಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ, ದೇವಸ್ಥಾನದ ಅಧಿಕಾರಿಗಳು ಸುಳ್ಳು ಈ ಪ್ರಚಾರವನ್ನು ನಿರಾಕರಿಸಿದ್ದರು. ಇದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಮೊಸಳೆ ಇನ್ನೂ ಆರೋಗ್ಯವಾಗಿದೆ ಎಂದು ಹೇಳಿದ್ದರು.

ಬಬಿಯಾ ಸಾವಿನ ಪ್ರಚಾರದ ನಂತರವೂ ಮೊಸಳೆ ದೇವಸ್ಥಾನದ ಅಂಗಳವನ್ನು ತಲುಪಿತ್ತು. ಈಗ ಬಬಿಯಾ ನಿಧನ ಹೊಂದಿದ ಸುದ್ದಿ ತಿಳಿದ ಭಕ್ತರು ಸೇರಿದಂತೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.