ಜ್ವರ, ನೆಗಡಿಗೆ ಆ್ಯಂಟಿಬಯೋಟಿಕ್ಸ್ ಬೇಡ: ಐಸಿಎಂಆರ್ ಸಲಹೆ

ಶೀತ ನೆಗಡಿ, ಜ್ವರದಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವೈದ್ಯರು ಆ್ಯಂಟಿಬಯೋಟಿಕ್ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿ ರೋಗಿಗಳನ್ನು ಸಾಗಹಾಕುವ ರೂಢಿ ಇತ್ತೀಚೆಗೆ ಹೆಚ್ಚಿದೆ. ಆ್ಯಂಟಿಬಯೋಟಿಕ್ ಬರೆದುಕೊಡುವುದು ವೈದ್ಯರಿಗೆ ಸುಲಭ, ರೋಗಿಗೆ ಕಷ್ಟ. ಇದರಿಂದ ತಕ್ಷಣಕ್ಕೆ ಆರೋಗ್ಯ ಸಮಸ್ಯೆ ಸುಧಾರಿಸಿದರೂ ದೀರ್ಘಾವಧಿಯಲ್ಲಿಆಗುವ ಪರಿಣಾಮ ದುಬಾರಿ. ಆದ್ದರಿಂದಲೇ ಈಗ ಐಸಿಎಂಆರ್ ಆ್ಯಂಟಿಬಯೋಟಿಕ್ ಬಳಕೆಯಲ್ಲಿತೋರಬೇಕಾದ ವಿವೇಚನೆ ಕುರಿತು ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.