ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್

ಇಂಡಿ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ನಿ ಟಿಪ್ಪು ಸುಲ್ತಾನ್‍ರವರ ಜಯಂತಿ ಆಚರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ತಾಲ್ಲೂಕು ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ, ದೇಶದ ಪರವಾಗಿ ಹೋರಾಟ ಮಾಡಿ, ಮಕ್ಕಳ ಒತ್ತೇ ಇಟ್ಟು ಸ್ವತಂತ್ರ ಮಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿರುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಅಡಚಣೆ ಮಾಡುತ್ತಾರೆ ಎಂದರೆ ಇದು ನಾಚಿಕೆ ಗೆಡಿನ ಸಂಗತಿ ಮತ್ತು ಒಂದು ಸಮುದಾಯದಕ್ಕೆ ದುಃಖದ ಸಂಗತಿ ಎಂದರು. ಜಾತಿ ಮತ ಪಂಥ ಬಿಟ್ಟು ದೇಶದ ಪರವಾಗಿ ಹೋರಾಟ ಮಾಡಿದ ಟಿಪ್ಪು ಸುಲ್ತಾನ್ ಜಯಂತಿ ಸರಕಾರ ಯಾವುದೇ ತಾರತಮ್ಯ ಮಾಡದೇ ನಾಡಿನ ತುಂಬೆಲ್ಲಾ ಸಾರ್ವಜನಿಕವಾಗಿ ಜಯಂತಿ ಆಚರಣೆ ಮಾಡಲು ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಸಮಾಜದ ಮುಖಂಡರು ಮುಕ್ತಾರ ಟಾಂಗೆವಾಲೆ, ಜಾವೀದ ಮೊಮಿನ, ಫಯಾಜ ಬಾಗವಾನ,ಅಸ್ಲಂ ಕಡಣಿ, ಹಸನ ಮುಜಾವರ,ರಮಜಾನ ವಾಲಿಕಾರ ಇನ್ನೂ ಅನೇಕರು ಉಪಸ್ಥಿತರಿದರು.