ಮಜೇಥಿಯಾ ಫೌಂಡೇಶನ್‍ಗೆ 13 ವರ್ಷ ಸಮಾರಂಭ
ಮಜೇಥಿಯಾ ಫೌಂಡೇಶನ್ ಸ್ಥಾಪಿಸಿ 13 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆ. 22 ರಂದು ಸಂಜೆ 4:30 ಗುಜರಾತ್ ಭವನದಲ್ಲಿ ಫೌಂಡೇಶನ್ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಕಶಪ್ ಮಜೇಥಿಯಾ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಇದುವರೆಗೂ ಕೈಗೊಂಡಿರುವ ಸಮಾಜ ಮುಖಿ ಕಾರ್ಯಗಳ ವಿವರಣೆ ನೀಡಿದರು. ಸೆ.22 ರಂದು ನಡೆಯುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೆ.ಜಿ.ಎಸ್.ಎಸ್ ಟ್ರಸ್ಟ್ ಚೇರ್ಮನ್ ಕನಯ್ಯಾ ಲಾಲ್ ಥಕ್ಕರ್, ಆಶಾ ಹಾರ್ಟ್ ಆ್ಯಂಡ್ ಡಯಾಬಿಟಿಕ್ ಫೌಂಡೇಶನ್ ಸಂಸ್ಥಾಪಕ ಡಾ.ಜಿ.ಬಿ.ಸತ್ತೂರ ಭಾಗವಹಿಸಲಿದ್ದು, ಅಂದು ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ವೈದ್ಯರು, ನರ್ಸ್, ಫ್ರಂಟ್ ಲೈನ್ ವಾರಿಯರ್ಸ್, ಸಮಾಜ ಸೇವಕರಿಗೆ ಸನ್ಮಾನಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ.ರಮೇಶ ಬಾಬು, ಡಾ.ನಿಟಾಲಿ, ಪ್ರಲ್ಹಾದ್ ರಾವ್, ಅಮರೇಶ ಹಿಪ್ಪರಗಿ ಇದ್ದರು.