ಪಂಚಮಸಾಲಿ 2Aಗೆ ಸೇರಿಸಬೇಕು, ಲಿಂಗಾಯತರ ಹೋರಾಟ....
ಪಂಚಮಸಾಲಿ ಸಮಾಜವನ್ನು 2A ಮೀಸಲಾತಿಗೆ ಸೇರಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘದವರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ನಮ್ಮ ಪಂಚಮಸಾಲಿ ಸಮಾಜವನ್ನು 2A, ಮೀಸಲಾತಿಗೆ ಒಳಪಡೆಸುವಂತೆ ಈಗಾಗಲೇ ಸಮಾಜ ಸ್ವಾಮೀಜಿಗಳು, ಸಮಾಜದ ಮುಖಂಡರು ಹೋರಾಟ ಮಾಡುತ್ತಾ ಬಂದಿದ್ದಾರೆ. ಇನ್ನು ವರೆಗೆ 2A ಮೀಸಲಾತಿಗೆ ಸೇರಿಸಿಲ್ಲ ಎಂದು ಜಿಲ್ಲಾ ಪಂಚಮಸಾಲಿ ಸಂಘಟನೆ ಜಯ ಬಸವೇಶ, ಜೈ ಪಂಚಮಶಾಲಿ ಎಂದು ಜೈಕಾರ ಹಾಕುತ್ತಾ ಪ್ರತಿಭಟನೆ ನಡೆಸಿದ್ರು. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆರು ತಿಂಗಳ ಕಾಲಾವಕಾಶ ಕೇಳಿದ್ರು. ಈಗಾ ಆರು ತಿಂಗಳ ಗಡವು ಮುಗದಿದ್ದು, ಇನ್ನಮುಂದೇ ಆದ್ರು ನಮ್ಮ ಮನವಿಗೆ ಸ್ಪಂದಿಸಿ ಪಂಚಮಸಾಲಿ ಸಮಾಜವನ್ನು 2A,ಸೇರಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ರು.