ಹನುಮ ಜಯಂತಿ ಆಚರಣೆ ಹಿನ್ನೆಲೆ; 3 ದಿನ‌ ಮದ್ಯ ಮಾರಾಟ ನಿಷೇಧ

ಹನುಮ ಜಯಂತಿ ಆಚರಣೆ ಹಿನ್ನೆಲೆ; 3 ದಿನ‌ ಮದ್ಯ ಮಾರಾಟ ನಿಷೇಧ

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಾದ್ಯಂತ ಹನುಮ ಜಯಂತಿ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧಲಾಗಿದೆ. ಅಲ್ಲದೆ ಒಂದು ದಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹನುಮ ಜಯಂತಿ ಶೋಭಾಯಾತ್ರೆಯ ಸಾಗುವ ದಾರಿಯಲ್ಲಿ ಪಥ ಸಂಚಲನ ಮಾಡಲಾಗಿದೆ. ಈಗಾಗಲೇ ಅಗತ್ಯ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆಗಾಗಿ 1,700 ಮಂದಿ ಪೊಲೀಸರು, 9 ಡಿಎಆರ್‌, 8 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.