ಸುಳ್ಳು ಭಾಷಣ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಸುಳ್ಳು ಭಾಷಣ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು: 'ಜನರ ಹೊಟ್ಟೆಗೆ ಸಮರ್ಪಕವಾಗಿ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವ ಗುರು ಮಾಡಲು ಸಾಧ್ಯವೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

'ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ.

ಸುಳ್ಳು ಭಾಷಣಗಳನ್ನು ಬಿಟ್ಟರೆ ಯಾವ ಸಾಧನೆಯೂ ಇಲ್ಲ. ಭಾರತವನ್ನು ಹಿಂದೆ ತಳ್ಳಿ ಅಕ್ಕಪಕ್ಕದ ದೇಶಗಳು ಮುಂದಕ್ಕೆ ಹೋಗುತ್ತಿರುವ ವಿಚಾರವನ್ನು ಮರೆ ಮಾಚಲು ಧರ್ಮ, ಜಾತಿ, ಕೋಮು ದ್ವೇಷಗಳನ್ನು ಮುಂದೆ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಲಾಗುತ್ತಿದೆ' ಎಂದು ಅವರು ಟೀಕಿಸಿದ್ದಾರೆ.

'ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಷಯಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ. ಇದನ್ನು ಅರಿತುಕೊಳ್ಳದಿದ್ದರೆ ಈ ದೇಶದ ಬಡವರು, ಮಧ್ಯಮವರ್ಗದವರು, ದಲಿತರು, ರೈತರು, ಹಿಂದುಳಿದವರು, ಪಶುಪಾಲಕರು, ಆದಿವಾಸಿಗಳು, ಮಹಿಳೆಯರು, ಕಾರ್ಮಿ ಕರು, ಕುಶಲಕರ್ಮಿಗಳಾದಿಯಾಗಿ ಯಾರಿಗೂ ಉಳಿಗಾಲವಿಲ್ಲ' ಎಂದರು.