ಚಳಿಗಾಲದ ಪ್ರವಾಸ; ಮನ ಸೂರೆಗೊಳಿಸುವ ಮೈಸೂರು

ಚಳಿಗಾಲದ ಪ್ರವಾಸ ಎಂದ ತಕ್ಷಣ ನೆನಪಾಗುವ ಹೆಸರು ಮೈಸೂರು. ಐತಿಹಾಸಿಕ ಕಟ್ಟಡಗಳು ಹೊಂದಿರುವ 'ಕರ್ನಾಟಕದ ಸಾಂಸ್ಕ್ರತಿಕ ರಾಜಧಾನಿ' ಪ್ರವಾಸಿಗರ ಸ್ವರ್ಗ. ಮೈಸೂರು ಅಂಬಾವಿಲಾಸ ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ರಂಗನತಿಟ್ಟು ಪಕ್ಷಿಧಾಮ, ಚಾಮುಂಡಿ ಬೆಟ್ಟ, ಕೆ.ಆರ್.ಎಸ್. ಡ್ಯಾಂ ಹೀಗೆ ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಅನೇಕ ಇವೆ. ಚಾರಣ ಪ್ರಿಯರಿಗೂ ಇದು ಹೇಳಿ ಮಾಡಿಸಿದ ಸ್ಥಳ. ಮಂಜು ಮುಸುಕಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಹತ್ತುವ ಅನುಭವವೇ ರೋಮಾಂಚನಕಾರಿ.