ಭಗೀರಥನ ಕ್ಷೇತ್ರದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು | Chikkaballapur |

ತುಂಬಿ ಹರಿಯುತ್ತಿರುವ ಕೆರೆಗಳಿಗೆ ಬಾಗೀನ ಅರ್ಪಿಸಿದ ಡಾ.ಕೆ.ಸುಧಾಕರ್ ಇವತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮುಖದಲ್ಲಿ ಮಂದಹಾಸ ಮೂಡಿತ್ತು. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅವರ ಕ್ಷೇತ್ರದ ಕೆರೆಗಳು ತುಂಬಿ ಹರಿಯುತ್ತಿವೆ. ಒಂದೇ ದಿನ ಅವರು ಮೂರು ಕರೆಗಳಿಗೆ ಬಾಗೀನ ಅರ್ಪಿಸಿ ಸಂತಸಗೊಂಡರು.. ವಾ/ಒ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆರೆಗಳು ಮೈತುಂಬಿವೆ. ನಗರದ ಕುಡಿಯುವ ನೀರಿನ ಕಣಜ ಎಂದೇ ಖ್ಯಾತವಾಗಿರುವ ಜಕ್ಕಲಮಡುಗು ಜಲಾಶಯ ತುಂಬಿ ಹರಿಯುತ್ತಿದೆ. ಜಕ್ಕಲ ಮಡುಗು ಜಲಾಶಯದ ನೀರು ಶ್ರೀನಿವಾಸ ಸಾಗರಕ್ಕೆ ಹರಿದು ಶ್ರೀನಿವಾಸ ಸಾಗರ ಡ್ಯಾಂ ನಿಂದ ಧುಮುಕುತ್ತಿರುವ ನೀರಿನ ಜಲಪಾತ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇನ್ನು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುವ ಮಂಚೇನಹಳ್ಳಿಗೆ ಕುಡಿಯುವ ನೀರಿನ ಕೆರೆ ಎಂದೆ ಕರೆಯಲಾಗುತ್ತದೆ. ದಂಡಿಗಾನಹಳ್ಳಿ ಕೆರೆಯು ಕೇತೇನಹಳ್ಳಿ ಫಾಲ್ಸ್‍ನಿಂದ ಹರಿದ ನೀರಿನಿಂದ ತುಂಬಿ ತುಳುಕುತ್ತಿದೆ. ತನ್ನ ಕ್ಷೇತ್ರಕ್ಕೆ ನೀರನ್ನ ಹರಿಸಿ ಬರದ ನಾಡನ್ನ ಹಸಿರು ನಾಡನ್ನಾಗಿ ಮಾಡುವ ಕನಸು ಕಂಡಿರುವ ಆಧುನಿಕ ಭಗೀರಥ ಡಾ.ಕೆ.ಸುಧಾಕರ್ ಇಂದು ಜಕ್ಕಲಮಡುಗು, ಶ್ರೀನಿವಾಸ ಸಾಗರ ಮತ್ತು ದಂಡಿಗಾನಹಳ್ಳಿ ಕೆರೆಗಳಿಗೆ ಬಾಗೀನ ಅರ್ಪಿಸಿ ಕ್ಷೇತ್ರದಲ್ಲಿ ಸದಾ ಹೀಗೆಯೆ ನೀರು ಹರಿಯುತ್ತಿರಲಿ ಎಂದು ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದರು. ಡಾ.ಕೆ.ಸುಧಾಕರ್ ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ಮಾವು ಅಭಿವೃದ್ದಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಜಿಲ್ಲಾಧಿಕಾರಿ ಆರ್.ಲತಾ, ನಗರಸಭಾಧ್ಯಕ್ಷ ಅನಂದಬಾಬುರೆಡ್ಡಿ, ಕಿದ್ವಾಯಿ ಸ್ಮಾರಕ ಗ್ರಂಥಿ ಆಡಳಿತ ಮಂಡಳಿ ನಿರ್ದೇಶಕ ಎಂ.ಜಯರಾಮ್ ಸಾಥ್ ನೀಡಿದರು ಕೆ.ಎಸ್.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ.