ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: 24 ಗಂಟೆಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಾವಣೆ

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: 24 ಗಂಟೆಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಾವಣೆ

ಬೆಂಗಳೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್(ಟಿಸಿ) ದುರಸ್ತಿಗೆ ಬಂದ 24 ಗಂಟೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಯೋಜನೆಯನ್ನು ರಾಜ್ಯದಲ್ಲಿ ಡಿಸೆಂಬರ್ 10 ರಿಂದ ಜಾರಿಗೆ ತರಲಾಗುತ್ತಿದೆ.

ಇಂಧನ ಇಲಾಖೆ ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಇನ್ನು ಮುಂದೆ ಟಿಸಿ ಬದಲಾವಣೆಗಾಗಿ ರೈತರು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಇದನ್ನು ತಪ್ಪಿಸಿ 24 ಗಂಟೆಯಲ್ಲಿ ಹಾಳಾದ ಟಿಸಿಯನ್ನು ಬದಲಾವಣೆ ಮಾಡಿಕೊಡಲಾಗುವುದು. ಇದಕ್ಕಾಗಿ ರಾಜ್ಯದ 160 ಸ್ಥಳಗಳಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್, ಟಿಸಿ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇನ್ನು ರೈತರು ಟ್ರಾನ್ಸ್ ಫಾರ್ಮರ್ ಸಾಗಿಸಲು ವಾಹನ ತರಬೇಕಿಲ್ಲ. ವಿದ್ಯುತ್ ಉಪ ಕೇಂದ್ರಗಳಲ್ಲಿಯೇ ವಾಹನಗಳಿರಲಿದ್ದು, ಅವುಗಳ ಮೂಲಕವೇ ಟಿಸಿ ಸಾಗಿಸಲಾಗುತ್ತದೆ. ಟಿಸಿ ಬದಲಾಯಿಸಲು ರೈತರಿಂದ ಲಂಚ ಪಡೆದರೆ ಸಂಬಂಧಿಸಿದ ಇಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಇನ್ನು ಕೃಷಿ ಪಂಪ್ಸೆಟ್ ಗಳಿಗೆ ಸೋಲಾರ್ ಅಳವಡಿಸುವ ಯೋಜನೆ ಸಿದ್ಧವಾಗಿದೆ. ಮೂರರಿಂದ ನಾಲ್ಕು ಲಕ್ಷ ರೈತರ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.