ನಾನು ಬ್ರಾಹ್ಮಣ ಕುಟುಂಬದವಳೇ, ಪ್ರಮಾಣಪತ್ರದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ

ನಾನು ಬ್ರಾಹ್ಮಣ ಕುಟುಂಬದವಳೇ, ಪ್ರಮಾಣಪತ್ರದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ

ಪಣಜಿ: ಉತ್ತರಪ್ರದೇಶದ ಲಖಿಂಪುರದ ಹಿಂಸಾಚಾರ ಪ್ರಕರಣ ಅತ್ಯಂತ ಖೇದಕರ ಸಂಗತಿಯಾಗಿದೆ. ವಾಹನಕ್ಕೆ ರೈತರು ಸಿಲುಕಿರುವ ಇಡೀ ಘಟನೆ ನೋವಿನ ಸಂಗತಿ ಎಂದು ಎಸ್‍ಐಟಿ ಒಪ್ಪಿಕೊಂಡಿದೆ. ಇದು ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಣಜಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಲಖಿಂಪುರದ ಹಿಂಸಾಚಾರ ಪ್ರಕರಣದ ಹೊಣೆ ಹೊತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು, ಇಷ್ಟೇ ಅಲ್ಲದೆಯೇ ಕೇಂದ್ರ ಗೃಹಮಂತ್ರಿಗಳು ಕೂಡ ರಾಜೀನಾಮೆ ನೀಡಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು ಶಾಂತವಾಗಿರುವುದು ಇನ್ನು ಹೆಚ್ಚಿನ ಅನುಮಾನ ಮೂಡಿಸಿದೆ. ಗೋವಾದ ಮೇಲೆ ದೆಹಲಿಯ ದಾದಾಗಿರಿ ನಡೆಯುವುದಿಲ್ಲ ಎಂದು ಹೇಳಿದರು.

ನಾನು ಒಬ್ಬ ಬ್ರಾಹ್ಮಣ ಕುಟುಂಬದವಳೇ ಆಗಿದ್ದೇನೆ. ನನಗೆ ಬಿಜೆಪಿಯ ಪ್ರಮಾಣಪತ್ರದ ಅಗತ್ಯವಿಲ್ಲ. ಚುನಾವಣೆ ಬಂದ ಕೂಡಲೆ ಬಿಜೆಪಿಯವರು ದೇವಸ್ಥಾನಕ್ಕೆ ತೆರಳುತ್ತಾರೆ. ಗೋವಾದಲ್ಲಿ ಎಂಜಿಪಿ ಬೆಂಬಲದೊಂದಿಗೆ ಟಿಎಂಸಿ ಸರ್ಕಾರ ರಚನೆ ಮಾಡಲಿದೆ. ಯಾರು ಅವರೊಂದಿಗೆ ಹೋಗಬೇಕೆಂದಿದ್ದೀರೊ ಅವರು ಹೋಗಬಹುದು ಎಂದು ನುಡಿದರು.