ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮಾಧುಸ್ವಾಮಿ ವಿರುದ್ಧ ನಿಲ್ಲಲಿ: ವೈ.ಎ ನಾರಾಯಣಸ್ವಾಮಿ ಸವಾಲ್‌

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮಾಧುಸ್ವಾಮಿ ವಿರುದ್ಧ ನಿಲ್ಲಲಿ: ವೈ.ಎ ನಾರಾಯಣಸ್ವಾಮಿ ಸವಾಲ್‌

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ ವಿರುದ್ಧ ನಿಲ್ಲಲಿ ಎಂದು ವಿಧಾನ ಪರಿಷತ್‌ ಮುಖ್ಯಸಚೇತಕ ವೈ.ಎ ನಾರಾಯಣಸ್ವಾಮಿ ಸವಾಲ್‌ ಹಾಕಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಕಷ್ಟ ಕಾಲದಲ್ಲಿ ಬಾದಾಮಿ ಜನತೆ ಕೈ ಹಿಡಿದರು. ಆದರೆ ಈಗ ಅಲ್ಲಿನ ಜನರಿಗೆ ಮೋಸ ಮಾಡಿ ಕೋಲಾರದತ್ತ ಮುಖ ಮಾಡಿದ್ದಾರೆ. 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದವರು ಸ್ವಂತ ನೆಲೆ ಇಲ್ಲದೇ ಕ್ಷೇತ್ರಕ್ಕಾಗಿ ಅಲೆದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ಖೆಡ್ಡಾ ರೆಡಿಯಾಗಿದೆ. ಸ್ವಪಕ್ಷದ ನಾಯಕರಾದ ರಮೇಶ್‌ ಕುಮಾರ್‌ ಸೇರಿದಂತೆ ಹಲರು ಸಿದ್ದರಾಮಯ್ಯ ಸೋಲಿಸಲು ಖೆಡ್ಡಾ ಸಿದ್ಧಗೊಳಿಸಿದ್ದಾರೆ ಎಂದು ಹೇಳಿದ್ದಾರೆ.