ಭಾರತ ದಾಳಿಗೆ ಮುಂದಾದರೆ ಯುದ್ಧಕ್ಕೆ ಸಿದ್ಧ: ಪಾಕ್‌ ಸೇನಾ ಮುಖ್ಯಸ್ಥ

ಭಾರತ ದಾಳಿಗೆ ಮುಂದಾದರೆ ಯುದ್ಧಕ್ಕೆ ಸಿದ್ಧ: ಪಾಕ್‌ ಸೇನಾ ಮುಖ್ಯಸ್ಥ

ನಮ್ಮ ಮಾತೃಭೂಮಿಯ ಪ್ರತಿ ಇಂಚು ಜಾಗವನ್ನೂ ರಕ್ಷಿಸಿಕೊಳ್ಳುವ ಶಕ್ತಿ ನಮಗಿದೆ. ದೇಶದ ಮೇಲೆ ಭಾರತದ ಸೇನೆ ದಾಳಿ ಮಾಡಿದರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿದೆ ಎಂದು ಪಾಕ್​ ಸೇನಾಪಡೆಯ ನೂತನ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಯುದ್ಧೋನ್ಮಾದದ ಹೇಳಿಕೆ ನೀಡಿದ್ದಾರೆ. ನಮ್ಮ ಸಶಸ್ತ್ರ ಪಡೆಗಳು ತಾಯಿನಾಡನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಯುದ್ಧ ನಡೆದದ್ದೇ ಆದಲ್ಲಿ ಅದು ಶತ್ರುಗಳಿಗೇ ಕಂಟಕವಾಗಲಿದೆ ಎಂದು ಹೇಳಿದ್ದಾರೆ.