ಕೊರೊನಾ ರಿಪೋರ್ಟ್ : ಕಳೆದ ೨೪ ಗಂಟೇಲಿ ೪೧,೧೯೫ ಮಂದಿಗೆ ಸೋಂಕು

ಕೊರೊನಾ ರಿಪೋರ್ಟ್ : ಕಳೆದ ೨೪ ಗಂಟೇಲಿ ೪೧,೧೯೫ ಮಂದಿಗೆ ಸೋಂಕು
ಕೊರೊನಾ ರಿಪೋರ್ಟ್ ಕಳೆದ ೨೪ ಗಂಟೇಲಿ ೪೧,೧೯೫ ಮಂದಿಗೆ ಸೋಂಕು
 
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಏರಿಳಿತ ಮುಂದುವರೆದಿದ್ದು, ಕಳೆದ ೨೪ ಗಂಟೆಗಳಲ್ಲಿ ೪೧,೧೯೫ ಮಂದಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.ಇದೇ ಅವಧಿಯಲ್ಲಿ ೪೯೦ ಜನರು ಮೃತಪಟ್ಟಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ ೩೨,೦೭೭,೭೦೬ ಕ್ಕೆ ಏರಿಕೆಯಾಗಿದೆ. ಜೊತೆಗೆ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ೪,೨೯,೬೬೯ ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ೩೮೭,೯೮೭ ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.