500 ರೂಪಾಯಿ ನೋಟಿನಲ್ಲಿ ಮೂಡಿ ಬಂದ ʻಪ್ರಧಾನಿ ನರೇಂದ್ರ ಮೋದಿʼ ಭಾವಚಿತ್ರ

500 ರೂಪಾಯಿ ನೋಟಿನಲ್ಲಿ ಮೂಡಿ ಬಂದ ʻಪ್ರಧಾನಿ ನರೇಂದ್ರ ಮೋದಿʼ ಭಾವಚಿತ್ರ

ಮುಂಬೈ: ಹೊಸ ನೋಟುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಬೇಕು ಎಂಬ ಬೇಡಿಕೆಯ ಬೆನ್ನಲ್ಲೇ, ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರಕರ್ ಅವರ ಫೋಟೋವನ್ನು ಮುದ್ರಿಸಬೇಕು ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಮ್ ಕದಮ್, ʻ500 ರೂಪಾಯಿ ನೋಟುಗಳಲ್ಲಿ ಮರಾಠ ಚಕ್ರವರ್ತಿ ಶಿವಾಜಿ ಮತ್ತು ಸಮಾಜ ಸುಧಾರಕ-ನ್ಯಾಯಶಾಸ್ತ್ರಜ್ಞ ಬಿಆರ್ ಅಂಬೇಡ್ಕರ್, ವಿಡಿ ಸಾವರ್ಕರ್ ಮತ್ತು ಪಿಎಂ ಮೋದಿ ಅವರ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ 'ಅಖಂಡ ಭಾರತ, ನಯ ಭಾರತ, ಮಹಾನ್ ಭಾರತ. ಜೈ ಶ್ರೀ ರಾಮ್. ಜೈ ಮಾತಾ ದಿ.' ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತ ಭಾರತೀಯ ರೂಪಾಯಿ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಮಾತ್ರ ಬಳಸಲಾಗಿದೆ.