ರಾಂಚಿಯಲ್ಲಿ 13 ವರ್ಷದ ಬಾಲಕಿ ಮೇಲೆ 7 ಜನರ ಸಾಮೂಹಿಕ ಅತ್ಯಾಚಾರ; 4 ಅಪ್ರಾಪ್ತರ ಬಂಧನ
ರಾಂಚಿಯಲ್ಲಿ 13 ವರ್ಷದ ಬಾಲಕಿ ಮೇಲೆ 7 ಜನರ ಸಾಮೂಹಿಕ ಅತ್ಯಾಚಾರ; 4 ಅಪ್ರಾಪ್ತರ ಬಂಧನ
ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಏಳು ಜನರು ಗುರುವಾರ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ವರದಿಯಾಗಿದೆ. ರಾಂಚಿಯ ಮಂದಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಏಕಾಂತ ಸ್ಥಳದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ ಹುಡುಗಿಯ ಸ್ನೇಹಿತ ಎಂದು ಹೇಳಲಾಗಿದೆ.
ರಾಂಚಿ (ಗ್ರಾಮಾಂತರ) ಪೊಲೀಸ್ ಅಧೀಕ್ಷಕ ನೌಶಾದ್ ಆಲಂ ಅವರು, ಅಪ್ರಾಪ್ತ ಹುಡುಗಿ ಮಾಡಿದ ಆರೋಪದ ಆಧಾರದ ಮೇಲೆ ಮಂದಾರ್ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
“ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ನಂತರ, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಇಲ್ಲಿಯವರೆಗೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.” ಪೊಲೀಸರು ಬಂಧಿಸಿದ ನಾಲ್ವರು ಆರೋಪಿಗಳು ಅಪ್ರಾಪ್ತರು. ಇತರ ಮೂವರು ಶಂಕಿತರ ವಯಸ್ಸು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಅಧಿಕಾರಿಯು ಹಿಂದುಸ್ತಾನ್ ಟೈಮ್ಸ್‌ಗೆ, “ಬಂಧಿತರು ಇತರ ಆರೋಪಿಗಳ ಹೆಸರನ್ನು ಹಂಚಿಕೊಂಡಿದ್ದಾರೆ. ಅವರನ್ನು ಬಂಧಿಸಲು ನಾವು ದಾಳಿಗಳನ್ನು ನಡೆಸುತ್ತಿದ್ದೇವೆ.” ದೂರಿನಲ್ಲಿ, ಬ ಆರೋಪಿಯಲ್ಲೊಬ್ಬನಾದ ಆಕೆಯ ಸ್ನೇಹಿತ ನಿರಿಷ್ಟ ಸ್ಥಳಕ್ಕೆ ಆಕೆಯನ್ನು ಕರೆಸಿಕೊಂಡಿದ್ದಾನೆ.
ಅಪ್ರಾಪ್ತೆ ಅಲ್ಲಿಗೆ ತಲುಪಿದಾಗ, ಆರೋಪಿಯ ಆರು ಸ್ನೇಹಿತರನ್ನು ಅವಳು ಅಲ್ಲಿ ನೋಡಿದಳು. ಆರೋಪಿಗಳು ಸ್ಥಳದಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಅಪ್ರಾಪ್ತೆ ಮನೆಗೆ ಬಂದು ತನ್ನ ಹೆತ್ತವರಿಗೆ ಘಟನೆ ಬಗ್ಗೆ ಹೇಳಿದಾಗ ಘಟನೆ ಬೆಳಕಿಗೆ ಬಂದಿತು. ನಂತರ ಹುಡುಗಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರು. ಉಳಿದ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಶೋಧ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.