ಅಚ್ಚರಿ ಮೂಡಿಸಿದ ಮಗುವಿನ ನೆನಪಿನ ಶಕ್ತಿ

ಇಲ್ಲೊಂದು 14 ತಿಂಗಳ ಏಳೆಯ ಪುಟ್ಟ ಮಗು ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿ ಪ್ರವೇಶಿಸಿದ್ದಾಳೆ. ಹೌದು ಧಾರವಾಡದ ಮಾಳಮಡ್ಡಿಯ ರಮ್ಯಶ್ರೀ ಹಾಗೂ ವೈಭವ ಎನ್ನುವ ದಂಪತಿಯ ಮಗಳೇ ಈಗ ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿ ಪ್ರವೇಶಿಸಿದ್ದು. ಈ ರೇವಾ ಎನ್ನುವ ಮಗು ಇಮಡಿ ಬುಕ್ ಆಫ್ ರೇಕಾರ್ಡ್ ನಲ್ಲಿ ಪ್ರವೇಶ ಪಡೆಯಲು ಮಾಡಿದ್ದು, ಅದೇನೆಂದರೆ, 30 ತರಹದ ಹಣ್ಣು, 5 ತರಹದ ಕಾಯಿಪಲ್ಲೆ, 15 ತರಹಣದ ಪ್ರಾಣಿಗಳು, 10 ಪ್ರಕಾರದ ವಸ್ತು ಹಾಗೂ 30 ತರಹದ ವಸ್ತುಗಳು ಗುರುತಿಸುತ್ತಾಳೆ. ಈ ರೇವಾ ಒಂದು ವರ್ಷದವಳು ಇದ್ದಾಗಲೇ ದೇವ್ರ ಭಾವಚಿತ್ರ ಗುರುತಿಸುತಿದ್ದಳು. ಅಲ್ಲದೇ ಸಾಕು ಪ್ರಾಣಿಯ ಧ್ವನಿ ಅನುಕರಿಸಬಲ್ಲ ಸಾಮಥ್ರ್ಯ ಹೊಂದಿದ್ದಳು. ಹೀಗಾಗಿ ರೇವಾ ಪೋಷಕರು ಹಣ್ಣು, ಪ್ರಾಣಿ ಕಾಯಿಪಲ್ಲೆಯ ಹಾಗೂ ವಿವಿಧ ವಸ್ತುಗಳ ಬಗ್ಗೆ ತಿಳಿಸಿಕೊಡಲು ಆರಂಭಿಸಿದರು. ಹೀಗಾಗಿ ಆ ಮಗು ಆಗಸ್ಟ್ 21 ರಂದು ಇಂಡಿಯಾ ಬುಕ್ ಆಫ್ ರೇಕಾರ್ಡ್ನಲ್ಲಿ ಪ್ರವೇಶ ಪಡೆದಿದ್ದಾಳೆ. ಇನ್ನು ಈ ಮಗುವಿನ ಪೋಷಕರು ಇವಳ ಎಲ್ಲ ವಿಡಿಯೋಗಳನ್ನ ರೇಕಾರ್ಡ್ ಮಾಡಿ ಇಂಡಿಯಾ ಬುಕ್ ಆಫ್ ರೇಕಾರ್ಡ್ ಗೆ ಕಳಿಸಿದ್ದರು.