ಬನ್ನಿ ಮರದಲ್ಲಿ ಏಕಾಏಕಿ ಕುಂಭದ ಆಕೃತಿ ಪತ್ತೆ

ಧಾರವಾಡದ ರೇಣುಕಾ ನಗರದಲ್ಲಿ ಬನ್ನಿ ಮರದ ಬುಡದಲ್ಲಿ ಇದ್ದಕ್ಕಿದ್ದ ಹಾಗೆ ಕುಂಭದ ಆಕೃತಿಯೊಂದು ಕಾಣಿಸಿಕೊಂಡು ಸ್ಥಳೀಯರ ಗಮನಸೆಳೆದಿದೆ. ಹೌದು ನವರಾತ್ರಿ ಏಳನೇ ದಿನ ಬನ್ನಿ ಮರದ ಬುಡದಲ್ಲಿ ಈ ಆಕೃತಿ ಕಾಣಿಸಿಕೊಂಡಿದ್ದು, ಇದು ದೇವಿಯ ಆಕೃತಿ ಎಂದು ಸ್ಥಳೀಯರು ದೇವಿಯ ಮೊರೆ ಹೋಗಿದ್ದಾರೆ. ಪ್ರತಿನಿತ್ಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲು ಬರುವ ಸುಮಂಗಲೆಯರಿಗೆ ಇಷ್ಟು ದಿನ ಈ ಆಕೃತಿ ಕಾಣಿಸಿಕೊಂಡಿರಲಿಲ್ಲ. ಇಂದು ಏಕಾಏಕಿ ಕುಂಭದ ಆಕೃತಿ ಬನ್ನಿ ಮರದಲ್ಲಿ ಕಾಣಿಸಿಕೊಂಡಿದ್ದು, ಸುಮಂಗಲೆಯರು ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.ಈ ಆಕೃತಿ ಕಾಣಿಸಿಕೊಳ್ಳುತ್ತಿದ್ದಂತೆ ಮಹಿಳೆಯರು ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಕಾರ್ಯ ಕೂಡ ಮಾಡಿದ್ದಾರೆ. ಬನ್ನಿ ಮರದ ಬುಡದಲ್ಲಿ ಈ ರೀತಿಯ ಆಕೃತಿ ಕಾಣಿಸಿಕೊಂಡ ಸುದ್ದಿ ತಿಳಿದ ಕೂಡಲೇ ಅದನ್ನು ನೋಡಲು ಅನೇಕರು ಕುತೂಹಲದಿಂದ ಆಗಮಿಸುತ್ತಿದ್ದ ದೃಶ್ಯಗಳು ಕಂಡು ಬಂದಿವೆ.