ಯಾವುದೇ ವ್ಯಕ್ತಿ ದಿಢೀರ್ ಫೇಮಸ್ ಆಗಿಬಿಟ್ಟಾಗ ಅವರ ಡಿಮ್ಯಾಂಡ್ ಹೆಚ್ಚಾಗುತ್ತದೆ. ಅವರ ಸಂದರ್ಶನ, ಫೋಟೋ, ವಿಡಿಯೋ ನೋಡಲು ಜನರು ಮುಗಿಬೀಳುತ್ತಾರೆ. ಖ್ಯಾತ ಮ್ಯಾಗಜಿನ್, ಚಾನೆಲ್, ಪತ್ರಿಕೆಗಳು ಅವರ ಇಂಟರ್ವ್ಯೂ ಮಾಡುತ್ತವೆ. ಇದೀಗ ರಿಷಬ್ ಶೆಟ್ಟಿ ಅವರ ಸದ್ಯದ ಪರಿಸ್ಥಿತಿ ಹೀಗೆಯೇ ಇದೆ.
ರಿಷಬ್ ಬಿಟ್ಟರೂ ಕಾಂತಾರ (Kantara) ಕ್ರೇಜ್ ಅವರನ್ನು ಬಿಡುತ್ತಿಲ್ಲ. ತಾವೇ ಬರೆದು, ನಿರ್ದೇಶಿಸಿ, ನಟಿಸಿದ ಕಾಂತಾರ ಸಿನಿಮಾದ (Cinema) ಸಕ್ಸಸ್ ಖುಷಿಯಲ್ಲಿದ್ದಾರೆ ನಟ ರಿಷಬ್ ಶೆಟ್ಟಿ (Rishab Shetty). ಇದೀಗ ಅವರಿಗೆ ಇನ್ನೊಂದು ಹಿರಿಮೆ ಸಿಕ್ಕಿದೆ. ಫೇಮಸ್ ಮ್ಯಾಗಜಿನ್ (Magazine) ಒಂದು ತನ್ನ ಕವರ್ ಪೇಜ್ಗಾಗಿ (Coverpage) ನಟನ ಸ್ಟೈಲಿಷ್ ಫೋಟೋಶೂಟ್ ಮಾಡಿದೆ. ಇದರ ವಿಡಿಯೋವನ್ನು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರೂ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ಮ್ಯಾಗಜಿನ್ ಕವರ್ ಪೇಜ್ನಲ್ಲಿ ಕಾಂತಾರ ಹೀರೋ
ಪ್ರಸಿದ್ಧ ಹ್ಯಾಶ್ಟ್ಯಾಗ್ ಮ್ಯಾಗಜಿನ್ ಕವರ್ ಪುಟದಲ್ಲಿ ರಿಷಬ್ ಶೆಟ್ಟಿ ಅವರು ಮಿಂಚಲಿದ್ದಾರೆ. ಅವರ ಫೋಟೋ ಕವರ್ ಪೇಜ್ನಲ್ಲಿ ರಾರಾಜಿಸಲಿದೆ. ರಿಷಬ್ ಶೆಟ್ಟಿ ಈ ಸಂಬಂಧಿತ ಫೋಟೋಶೂಟ್ನ ಬಿಟಿಎಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ಆಯ್ತು ಬಿಟಿಎಸ್ ವಿಡಿಯೋ
ರಿಷಬ್ ಶೆಟ್ಟಿ ಅವರ ವೀಡಿಯೋ ಈಗ ವೈರಲ್ ಆಗಿದ್ದು ಈ ವಿಡಿಯೋಗೆ ಸುಮಾರು 86 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 267ಕ್ಕೂ ಹೆಚ್ಚು ಜನರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಇದೀಗ ಮ್ಯಾಗಜಿನ್ ಮುಖಪುಟದಲ್ಲಿ ಕನ್ನಡದ ಹೀರೋ ಮಿಂಚಲಿದ್ದು ಇದು ಸಿನಿ ಪ್ರೇಕ್ಷಕರಿಗೆ ಸಖತ್ ಖುಷಿ ಕೊಟ್ಟಿದೆ.