ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಆಲಂಕರಿಸಿದ ಭಾರತ
ನವದೆಹಲಿ: ಡಿ.1ರಿಂದ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಭಾರತ ಆಲಂಕರಿಸಿದೆ. ಇದರ ಅಂಗವಾಗಿ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಶೃಂಗಸಭೆಗಳು ಜರುಗಲಿವೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಥೀಮ್‌ನಡಿ ಈ ವರ್ಷದ ಶೃಂಗ ನಡೆಯಲಿದೆ. ಇದೇ ವೇಳೆ ಜಿ20 ರಾಷ್ಟ್ರಗಳ ಬಗ್ಗೆ ಅರಿವು ಮೂಡಿಸಲು ಯುಜಿಸಿ ವತಿಯಿಂದ “ಯುನಿವರ್ಸಿಟಿ ಕನೆಕ್ಟ್’ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.