ಸರ್ಕಾರದ ನಡೆಗೆ ಎಪಿಎಂಸಿ ವರ್ತಕರ ಖಂಡನೆ | Bengaluru |
ಸರ್ಕಾರ ಹಾಗೂ ಅಧಿಕಾರಿಗಳ ನಡೆ ಖಂಡಿಸಿ ಬೆಂಗಳೂರಿನ ನೆಲಮಂಗಲದ ದಾಸನಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ ಎಪಿಎಂಸಿ ವರ್ತಕರು ಮಾರುಕಟ್ಟೆ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿದರು. ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ವರ್ತಕರು ಯಶವಂತಪುರ ಹಾಗೂ ದಾಸನಪುರ ಎರಡು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಹೀಗಾಗಿ ದಾಸನಪುರದ ಮಾರುಕಟ್ಟೆಯಲ್ಲಿ ನಾನಾ ಸಮಸ್ಯೆ ತಲೆದೋರಿದೆ. ಆದ್ದರಿಂದ ಒಂದೇ ಕಡೆ ಎಪಿಎಂಸಿ ಮಾರುಕಟ್ಟೆಗೆ ಅವಕಾಶ ನೀಡಬೇಕು ಎಂದು ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ವರ್ತಕರು ಆಗ್ರಹಿಸಿದರು.