ಬಂಗಾಳಿ ಸಾಹಿತಿ ಬುದ್ಧದೇಬ್ ಗುಹಾ ನಿಧನ
ಕೋಲ್ಕತ್ತಾ: ಖ್ಯಾತ ಬಂಗಾಳಿ ಸಾಹಿತಿ ಬುದ್ಧದೇಬ್ ಗುಹಾ(85) ಅವರು ಭಾನುವಾರ ರಾತ್ರಿ ನಿಧನರಾದರು.
ಕಳೆದ ಏಪ್ರಿಲ್ನಲ್ಲಿ ಕರೊನಾ ಸೋಂಕಿಗೆ ತುತ್ತಾಗಿದ್ದ ಬುದ್ಧದೇಬ್ ತಿಂಗಳ ಬಳಿಕ ಗುಣಮುಖರಾಗಿದ್ದರು. ಇದೇ ತಿಂಗಳ ಆರಂಭದಲ್ಲಿ ಮೂತ್ರಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಆ.4ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಹೃದಯಾಘಾತದಿಂದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ವೃತ್ತಿಯಲ್ಲಿ ಲೆಕ್ಕ ಪರಿಶೋಧಕ ಆಗಿದ್ದ ಬುದ್ಧದೇಬಾ ಅವರಿಗೆ ಸಾಹಿತ್ಯದತ್ತ ಅತ್ಯಾಕರ್ಷಣೆ. ಅತ್ಯಂತ ಜನಪ್ರಿಯ ಲೇಖಕರಲ್ಲಿ ಒಬ್ಬರಾಗಿದ್ದ ಇವರು ಮಕ್ಕಳ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಇವರು ಸೃಷ್ಟಿಸಿದ್ದ 'ರಿಜುಡಾ' ಮತ್ತು 'ರುದ್ರ' ಪಾತ್ರಗಗಳು ಇಂದಿಗೂ ಜನಪ್ರಿಯವಾಗಿವೆ. ಇವರು ರಚಿಸಿದ 'ಮಧುಕರಿ' ಕೃತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಹಲವು ಪ್ರಶಸ್ತಿಗಳು ಸಂದಿವೆ.