ಸಾರ್ವಜನಿಕ ಗಣೇಶ ಚತುರ್ಥಿಗೆ ಆಗ್ರಹಿಸಿ ಪ್ರತಿಭಟನೆ
ಸಾರ್ವಜನಿಕ ಗಣೇಶ ಚತುರ್ಥಿಗೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ: ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಸಂಘಟನೆವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಳೆದ ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧಿಸಿದೆ. ಆದರೆ ಎಲ್ಲ ಜನ ಜೀವನ, ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆ ಮೇಲೆ ಹೊಡೆದಂತಗುತ್ತದೆ. ಮೂರ್ತಿಕಾರರು ನಾಲ್ಕಾರು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸುತ್ತಾರೆ ಅವರ ಸ್ಥಿತಿಏನು ? ಶಾಮಿಯಾನ , ವಿದ್ಯುದ್ದೀವವಾದ್ಯವೃಂದ ಮುಂತಾದ ಅವಲಂಬಿತರಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗುತ್ತದೆ . ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್ ಚಿತ್ರಮಂದಿರ ಚುನಾವಣೆ , ರಾಜಕೀಯ ಸಮಾವೇಶ ಶಾಲಾ , ಕಾಲೇಜ್ ಮುಂ ನಡೆಯುತ್ತಿವೆಯೋ ಅದೇ ರೀತಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದರು.
ಮುಖಂಡರಾದ ಗಂಗಾಧರ ಕುಲಕರ್ಣಿ, ಡಾ. ಈಶ್ವರಗೌಡ ಪಾಟೀಲ, ಮೈಲಾರಿ ಕುರುಬಗಟ್ಟಿ, ಪಾಂಡು ಎಮೋಜಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.