ಸರಳವಾಸ್ತು ಗುರೂಜಿ ಚಂದ್ರಶೇಖರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಹುಬ್ಬಳ್ಳಿ : ಸರಳವಾಸ್ತು ಗುರೂಜಿ ಚಂದ್ರಶೇಖರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಬಳಿ ಆರೋಪಿ ಹಂತಕರು ಹತ್ಯೆಗೆ ಪ್ರಮುಖ ಕಾರಣ ಬಿಚ್ಚಿಟ್ಟಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹಂತಕರು ಚಂದ್ರಶೇಖರ ಗುರೂಜಿ ಕಂಪನಿಗೆ ಕಷ್ಟಪಟ್ಟು ದುಡಿದವರು ನಾವು. ಆದರೆ ಗುರೂಜಿ ಕಂಪನಿಯೊಳಕ್ಕೆ ಅಣ್ಣನ ಮಕ್ಕಳನ್ನು ಬಿಟ್ಟುಕೊಂಡಿದ್ದಕ್ಕೆ ಬೇಸತ್ತು ಹತ್ಯೆ ಮಾಡಿದೆವು ಎಂದು ಸರಳವಾಸ್ತು ಗುರೂಜಿ ಹಂತಕರು ಕಾರಣ ಬಿಚ್ಚಿಟ್ಟಿದ್ದಾರೆ. ಗುರೂಜಿ ವಾಟ್ಸಪ್ ಗೆ ಸಂದೇಶ ಕಳುಹಿಸಿದ್ದ ಹಂತಕರು, ಕಂಪನಿಯಿಂದ 400 ಜನರನ್ನ ಏಕಾಏಕಿ ತೆಗೆದು ಹಾಕಿದಿರಿ. ಸಿಬ್ಬಂದಿಯ ಶಾಪ ನಿಮ್ಮನ್ನ ಸುಮ್ನೆ ಬಿಡುವುದಿಲ್ಲ ಎಂದು ಗುರೂಜಿ ಹತ್ಯೆ ಆರೋಪಿ ಮಂಜುನಾಥ ಮರೆವಾಡ 24-06-2019ರಂದು ಗುರೂಜಿಗೆ ಮಾಡಿದ್ದ ವಾಟ್ಸ್ ಆಪ್ ಮೇಸೆಜ್ ಅನ್ನು ಉಲ್ಲೇಖಿಸಿ, ಹುಬ್ಬಳ್ಳಿ ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.