ಕರ್ನಾಟಕ ಚೇತರಿಕೆಗೆ ವಿಶ್ವಬ್ಯಾಂಕ್ ನೆರವು

ಹವಾಮಾನ ವೈಪರೀತ್ಯದಿಂದ ಹೆಚ್ಚಿದ ನೆರೆ, ಭೂಕುಸಿತ, ಕಡಲ ಕೊರೆತ, ವಾಯುಭಾರ ಕುಸಿತ ಮತ್ತಿತರ ಸರಣಿ ವಿಪತ್ತುಗಳ ಹಾನಿ ಹಾಗೂ ನಷ್ಟವನ್ನು ತಗ್ಗಿಸಲು ವಿಶ್ವಬ್ಯಾಂಕ್‌ನಿಂದ ಜ್ಞಾನ, ತಂತ್ರಜ್ಞಾನ ಹಾಗೂ ಆರ್ಥಿಕ ನೆರವಿಗೆ ರಾಜ್ಯ ಸರಕಾರ ಮೊರೆಹೋಗಿದೆ. ಭವಿಷ್ಯದಲ್ಲಿ ವಿಕೋಪಗಳ ಪರಿಣಾಮಗಳ ತೀವ್ರತೆ ಹಾಗೂ ಆರ್ಥಿಕ ನಷ್ಟ ತಗ್ಗಿಸಲು ವಲ್ಡ್ ಬ್ಯಾಂಕ್ ಸಹಕಾರ ಪಡೆಯುವ ರಾಜ್ಯದ ಪ್ರಯತ್ನ ಫಲಪ್ರದವಾಗಿದ್ದು, 'ಕರ್ನಾಟಕ ಅಭಿವೃದ್ಧಿ ಚೇತರಿಕೆ ಯೋಜನೆ' ಸಿದ್ಧಗೊಂಡಿದೆ.