ವರದ್ಕರ್ ಐರ್ಲೆಂಡ್ ಪ್ರಧಾನಿ: ಭಾರತವು ಮಾನವ ಸಂಪನ್ಮೂಲದ ಕಣಜ ಎಂದ ಮಹೀಂದ್ರ

ವರದ್ಕರ್ ಐರ್ಲೆಂಡ್ ಪ್ರಧಾನಿ: ಭಾರತವು ಮಾನವ ಸಂಪನ್ಮೂಲದ ಕಣಜ ಎಂದ ಮಹೀಂದ್ರ

ಭಾರತ ಮೂಲದ ಲಿಯೋ ವರದ್ಕರ್ ಅವರು 2ನೇ ಬಾರಿಗೆ ಐರ್ಲೆಂಡ್‌ನ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಉದ್ಯಮಿ ಆನಂದ್‌ ಮಹೀಂದ್ರ, ಭಾರತವು 'ಮಾನವ ಸಂಪನ್ಮೂಲದ ಕಣಜ' ಎಂದಿದ್ದಾರೆ. ಈ ಬಗ್ಗೆ ಪೋಸ್ಟ್‌ ಪ್ರಕಟಿಸಿರುವ ಅವರು, 'ಬ್ರಿಟನ್‌ & ಐರ್ಲೆಂಡ್ 2 ಭಾರತ ಮೂಲದ ಪ್ರಧಾನಿಯನ್ನು ಹೊಂದಿವೆ. ಅಮೆರಿಕದ ಉಪಾಧ್ಯಕ್ಷೆಯೂ ಭಾರತ ಮೂಲದವರು. ಇದೊಂದು ಅಸಾಧಾರಣ ಸಂಗತಿ' ಎಂದು ಮಹೀಂದ್ರ ಬಣ್ಣಿಸಿದ್ದಾರೆ.