'ಬಂಡವಾಳಶಾಹಿಗಳ ಪರ ಸರ್ಕಾರ ನಿಲ್ಲುವುದು ಬಹಳ ಅಪಾಯಕಾರಿ' : ಬಿ.ಕೆ ಚಂದ್ರಶೇಖರ್

'ಬಂಡವಾಳಶಾಹಿಗಳ ಪರ ಸರ್ಕಾರ ನಿಲ್ಲುವುದು ಬಹಳ ಅಪಾಯಕಾರಿ' : ಬಿ.ಕೆ ಚಂದ್ರಶೇಖರ್

ಬೆಂಗಳೂರು : ಬಂಡವಾಳಶಾಹಿಗಳ ಪರವಾಗಿ ಸರ್ಕಾರ ನಿಲ್ಲುವುದು ಬಹಳ ಅಪಾಯಕಾರಿ ಎಂದು ಮಾಜಿ ಸಚಿವ ಬಿ.ಕೆ ಚಂದ್ರಶೇಖರ್ ಹೇಳಿದ್ದಾರೆ.

ಚುನಾವಣೆ ಮುನ್ನ ಮೋದಿ ಅವರು ದೇಶದಾದ್ಯಂತ ಅದಾನಿ ಅವರ ಚಾರ್ಟೆಡ್ ವಿಮಾನದಲ್ಲಿ ಪ್ರವಾಸ ಮಾಡಿದರು.

ಪ್ರಮಾಣ ವಚನ ಸ್ವೀಕರಿಸಲು ದೆಹಲಿಗೆ ಆಗಮಿಸಿದ್ದೂ ಅವರದ್ದೇ ಖಾಸಗಿ ವಿಮಾನದಲ್ಲಿ! ಪ್ರಧಾನಿ ಆದ ನಂತರದ ಬಹುತೇಕ ವಿದೇಶ ಪ್ರವಾಸಗಳಿಗೆ ಅದಾನಿ ಅವರನ್ನು ಖಾಸಗಿ ಅತಿಥಿಯನ್ನಾಗಿ ಕರೆದುಕೊಂಡು ಹೋಗಿದ್ದಾರೆ.

ಬಂಡವಾಳಶಾಹಿಗಳ ಪರವಾಗಿ ಸರ್ಕಾರ ನಿಲ್ಲುವುದು ಬಹಳ ಅಪಾಯಕಾರಿ. ಅದಾನಿ ಸಮೂಹ ಸಂಸ್ಥೆಯ ಅಕ್ರಮಗಳನ್ನು ನಿವೃತ್ತ ನ್ಯಾಯಾಧೀಶರು, ಪ್ರತಿಷ್ಠಿತ ಕಾರ್ಪೋರೇಟ್, ಪ್ರಭಾವಿ ವ್ಯಕ್ತಿಗಳನ್ನೊಳಗೊಂಡ ನಾಗರೀಕ ನ್ಯಾಯಾಧಿಕರಣ ರಚಿಸಿ ತನಿಖೆ ನಡೆಸಬೇಕು ಎಂದಿದ್ದಾರೆ.