ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್‌ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ

ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ ಕಿರಿಯ ಆಟಗಾರ್ತಿಯರ ಈ ಸಾಧನೆಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ. ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶಫಾಲಿ ವರ್ಮ ನೇತೃತ್ವದ ಭಾರತ ತಂಡ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ 7 ವಿಕೆಟ್‌ಗಳ ಅಂತದ ಭಾರೀ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ಈ ಸಾಧನೆಯ ಬಗ್ಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕ ಹರ್ಮನ್‌ಪ್ರೀತ್ ಕೌರ್ ಭಾರೀ ಮೆಚ್ಚುಗೆಯ ಮಾತಿಗಳನ್ನಾಡಿದ್ದಾರೆ. ಕಿರಿಯ ಆಟಗಾರ್ತಿಯರ ಈ ಸಾಧನೆ ತಮಗೆ ಕೂಡ ಹೊಸ ಸ್ಪೂರ್ತಿಯನ್ನು ನೀಡಿದೆ ಎಂದಿದ್ದಾರೆ ಹರ್ಮನ್‌ಪ್ರೀತ್ ಕೌರ್. "ನೀವು ಮಾಡಿರುವ ಸಾಧನೆ ನಮಗೆ ಪ್ರೇರಣೆಯಾಗಿದೆ. ದೇಶಕ್ಕೆ ಬಹುದೊಡ್ಡ ಉಡುಗೊರೆಯನ್ನು ದೇಶಕ್ಕೆ ನೀಡಿದ್ದೀರಿ. ಈ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಸಾಧನೆಗೆ ನಾವು ಹೆಮ್ಮೆಪಡುತ್ತೇವೆ" ಎಂದಿದ್ದಾರೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಸಿಂಗ್.
ಈ ವರ್ಷವೇ ನಡೆಯಲಿದೆ ಮಹಿಳಾ ಟಿ20 ವಿಶ್ವಕಪ್: ಈ ಬಾರಿ ಅಂಡರ್ 19 ಹಿಳಾ ಟಿ20 ವಿಶ್ವಕಪ್ ಮಾತ್ರವಲ್ಲದೆ ಮಹಿಳಾ ಕ್ರಿಕೆಟ್‌ನ ಮತ್ತೊಂದು ಮಹತ್ವದ ಟೂರ್ನಿ ನಡೆಯಲಿದೆ. ಮಹಿಳಾ ಟಿ20 ವಿಶ್ವಕಪ್ ಕೂಡ ಈ ವರ್ಷ ನಡೆಯಲಿದ್ದು ಈ ಟೂರ್ನಿಗೂ ದಕ್ಷಿಣ ಆಫ್ರಿಕಾವೇ ಆತಿಥ್ಯವಹಿಸಲಿದೆ. ಈ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದು ಭಾರತದ ಮಹಿಳಾ ತಂಡದ ಪ್ರದರ್ಶನ ಈಗ ಎಲ್ಲರ ಕುತೂಹಲ ಕೆರಳಿಸಿದೆ.
ಇನ್ನು ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಯುವ ಆಟಗಾರ್ತಿಯರ ಸಾಧನೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರಶಂಸಿಸಿದ್ದಾರೆ. ಟ್ವೀಟ್‌ಮೂಲಕ ಕೊಹ್ಲಿ, "ಅಂಡರ್-19 ವಿಶ್ವಕಪ್‌ನ ಚಾಂಪಿಯನ್ಸ್! ಎಂಥಾ ವಿಶೇಷವಾದ ಕ್ಷಣ. ಈ ಗೆಲುವಿಗಾಗಿ ನಿಮಗೆ ಅಭಿನಂದನೆಗಳು" ಎಂದು ಭಾರತದ ಆಟಗಾರ್ತಿಯರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ ವಿರಾಟ್ ಕೊಹ್ಲಿ.
ದಕ್ಷಿಣ ಆಫ್ರಿಕಾದ ಪೊಚೆಸ್ಟ್ರೂಮ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ ಎದುರಾಳಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು ಮೊದಲಿಗೆ ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತು. ಭಾರತದ ನಾಯಕಿ ಶಫಾಲಿ ವರ್ಮ ನಿರ್ಧಾರವನ್ನು ಸಮರ್ಥೆ ಮಾಡಿಕೊಳ್ಳುವಂತೆ ಅದ್ಭುತವಾಗಿ ಬೌಲಿಂಗ್ ನಡೆಸಿದ ಭಾರತ ಇಂಗ್ಲೆಂಡ್ ತಂಡವನ್ನು ಕೇವಲ 68 ರನ್‌ಗಳಿಗೆ ಆಲೌಟ್ ಮಾಡುವಲಗಲಿ ಯಶಸ್ವಿಯಾಗಿತ್ತು.
ಈ ಅಲ್ಪ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಹಂತದಲ್ಲಿ ಸಣ್ಣ ಹಿನ್ನಡೆ ಅನುಭವಿಸಿದರೂ ಅದು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆರಂಬಿಕ ಆಟಗಾರ್ತಿಯರಾದ ಶಫಾಲಿ ವರ್ಮ ಹಾಗೂ ಶ್‌ಏತಾ ಸೆಹ್ರಾವತ್ 20 ರನ್‌ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಸೌಮ್ಯ ತಿವಾರಿ ಹಾಗೂ ಗೊಂಗದಿ ತ್ರಿಷಾ ಉತ್ತಮ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದುನಿಲ್ಲಿಸಿದರು. ಅಂರಿಮವಾಗಿ ಭಾರತ 14 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ನೀಡಿದ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.