ಟೀಂ ಇಂಡಿಯಾಗೆ ದೊಡ್ಡ ಹೊಡೆತ: ವಿರಾಟ್ ಕೊಹ್ಲಿಗೆ ಕೋವಿಡ್-19 ಸೋಂಕು

ಟೀಂ ಇಂಡಿಯಾಗೆ ದೊಡ್ಡ ಹೊಡೆತ: ವಿರಾಟ್ ಕೊಹ್ಲಿಗೆ ಕೋವಿಡ್-19 ಸೋಂಕು

ವಿರಾಟ್ ಕೊಹ್ಲಿ ಯುಕೆಗೆ ಬಂದಿಳಿದ ನಂತರ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಟೀಮ್‌ ಇಂಡಿಯಾಕ್ಕೆ ದೊಡ್ಡ ಆಘಾತವಾಗಿರುವುದು ಸುಳ್ಳಲ್ಲ.

ವಿರಾಟ್ ಕೊಹ್ಲಿ ತಮ್ಮ ಮಾಲ್ಡೀವ್ಸ್ ಪ್ರವಾದಿಂದ ಆಗಮಿಸಿದ ನಂತರ ಅವರಿಗೆ ಕರೋನ ಸೋಂಕು ಇರೋದು ಧೃಡಪಟ್ಟಿದೆ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾವೆ.

ಟೀಮ್‌ ಇಂಡಿಯಾಕ್ಕೆ ಕೊಹ್ಲಿ ಪ್ರಮುಖ ಸದಸ್ಯರಾಗಿರುವುದರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎನ್ನುವ ಭಯ ಕೂಡ ಕಾಡುತ್ತಿದೆ. ಆದರೆ ಇಂಗ್ಲೆಂಡ್‌ ವಿರುದ್ದ ಟೆಸ್ಟ್ಗೆ ಸರಣಿಗೆ ಇನ್ನೂ ಸಮಯವಿದೆ ಮತ್ತು ಕೊಹ್ಲಿ ಬೇಗ ಗುಣಮುಖರಾಗಲಿದ್ದಾರೆ ಅಂತ ತಿಳಿದು ಬಂದಿದೆ. ಅಂದ ಹಾಗೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಜುಲೈ 1 ರಿಂದ 5 ರವರೆಗೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಶುರುವಾಗಲಿದೆ.