ಧಾರವಾಡ: ಯುವ ಕಲಾವಿದರನ್ನು ಕಡೆಗಣಿಸಿದ ಸರಕಾರ ಹಾಗೂ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಪ್ರೋತ್ಸಾಹಿಸುವ ಬದಲು ೩೫ ವರ್ಷದ ಕೆಳಗಿನವರಿಗೆ ಸರಕಾರದ ನೀತಿ ತಪ್ಪಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಶೈಲಗೌಡ ಪಾಟೀಲ್ ಕಮತರ ಅವರು ಜಿಲ್ಲಾಧಿಕಾರಿ ಹಾಗೂ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ, ಶ್ರೀಶೈಲಗೌಡ ಕಮತರ ಸಮಾಜದಲ್ಲಿ ಯುವ ಕಲಾವಿದರ ನೆರವಿಗೆ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಯುವ ಕಲಾವಿದರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದು ಸಂಘ, ಸಂಸ್ಥೆಗಳು ಹಾಗೂ ಸರಕಾರ ಆದಷ್ಟೂ ಬೇಗ ಅವರ ಜೀವನಕ್ಕಾದ ಆದಾಯದ ಕೊರತೆಯನ್ನು ನೀಗಿಸಲು ಮುಂದಾಗಬೇಕು. ಯುವ ಕಲಾವಿದರ ಹೆಚ್ಚಿನ ಪ್ರೋತ್ಸಾಹ ಕೊಟ್ಟು ಕಲೆಯನ್ನು ಉಳಿಸುವ ಕೆಲಸವಾಗಬೇಕು. ಸಂಬಂದಿಸಿದ ಸಚಿವರು ರಾಜ್ಯದಲ್ಲಿ ಧಾರವಾಡ ಜಿಲ್ಲೆಯಲ್ಲಿ ಯುವ ಕಲಾವಿದರು ಇದ್ದು ಅವರಿಗೆ ಆಧ್ಯತೆಯನ್ನು ಕೊಟ್ಟು ಪ್ರೋತ್ಸಾಹಿಸಲು ಮನವಿ ಮಾಡಿದರು. ಯುವ ಕಲಾವಿದರಾದ ಸಮುದ್ರ ಪಟ್ಟಣಶೆಟ್ಟಿ, ಉಮೇಶ ಮಾದರ, ಮಹಂತೇಶ ದೊಡ್ಡಮನಿ, ಯುವರಾಜ್ ಮಾದರ, ಚೇತನ ಧಾರವಾಡ ಉಪಸ್ಥಿತರಿದ್ದರು.