ಬೆಂಗಳೂರಿನಲ್ಲಿ ಕುಖ್ಯಾತ ಮೊಬೈಲ್ ಕಳ್ಳನ ಬಂಧನ: ಸಿಕ್ಕ ಪೋನ್ ಗಳು ಎಷ್ಟು ಗೊತ್ತಾ

ಬೆಂಗಳೂರಿನಲ್ಲಿ ಕುಖ್ಯಾತ ಮೊಬೈಲ್ ಕಳ್ಳನ ಬಂಧನ: ಸಿಕ್ಕ ಪೋನ್ ಗಳು ಎಷ್ಟು ಗೊತ್ತಾ

ಬೆಂಗಳೂರು: ನಗರದಲ್ಲಿನ ಮೊಬೈಲ್ ಕದಿಯುತ್ತಿದ್ದಂತ ಕಳ್ಳನ ಬೆನ್ನು ಬಿದ್ದಂತ ಪೊಲೀಸರು, ಕುಖ್ಯಾತ ಮೊಬೈಲ್ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸಿಕ್ಕ ಮೊಬೈಲ್ ಗಳನ್ನು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.ಹೌದು.. ನಗರದಲ್ಲಿ ಬೈಕ್ ನಲ್ಲಿ ತೆರಳಿ, ದಾರಿಹೋಕರಿಂದ ಮೊಬೈಲ್ ಪೋನ್ ಕಸಿದುಕೊಂಡು ಪರಾರಿಯಾಗುತ್ತಿದ್ದಂತ ಪ್ರಕರಣ ಸಂಬಂಧ ಪೊಲೀಸರಿಗೆ ತಲೆ ಬಿಸಿಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಹಲವು ದಿನಗಳಿಂದ ಬಲೆ ಬೀಸಿ, ಕೊನೆಗೆ ಕುಖ್ಯಾತ ಮೂವರು ನಟೋರಿಯಸ್ ಮೊಬೈಲ್ ಕಳ್ಳರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.ವಿಜಯನಗರ ಪೊಲೀಸರು ಬಂಧಿಸಿರುವಂತ ಕುಖ್ಯಾತ ಕಳ್ಳರನ್ನು ಸಜ್ಜಾದ್ ಖಾನ್, ರಿಜ್ವಾನ್ ಪಾಶಾ ಮತ್ತು ತಬ್ರೇಜ್ ಖಾನ್ ಎಂದು ಗುರುತಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಬರೋಬ್ಬರಿ 30 ಲಕ್ಷ ಮೌಲ್ಯದ 204 ಮೊಬೈಲ್ ಪೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಎರಡು ಹರಿತ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.