ವಿಲೇಜ್ ರೆಸ್ಟೋರೆಂಟ್' ನಲ್ಲಿ ದಾಂಧಲೆ ಪ್ರಕರಣ : ಏಳು ಮಂದಿ ಬಂಧನ

ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿ ಇರುವ ವಿಲೇಜ್ ರೆಸ್ಟೋರೆಂಟ್ ನಲ್ಲಿ ಊಟ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ದಾಂಧಲೆ ನಡೆಸಿದ 20 ಮಂದಿ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು ಎಫ್ ಐ ಆರ್ ದಾಖಲಾಗಿ 10 ದಿನಗಳಾದರೂ ಆರೋಪಿಗಳ ಬಂಧನವಾಗಿರಲಿಲ್ಲ, ನಂತರ ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಂದು (ಡಿ.1) ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಂಕರ್ ರೂಪೇನಾ ಅಗ್ರಹಾರ, ಕೀರ್ತಿ ಗಟ್ಟಹಳ್ಳಿ, ಅಭಿಷೇಕ್, ಪ್ರವೀಣ್ ಕುಮಾರ್ ಸೋಮಸುಂದರ ಪಾಳ್ಯ, ಹೇಮಂತ್ ಕುಮಾರ್ ಲಕ್ಕಸಂದ್ರ . ಅಭಿಷೇಕ್ ಬಂಡೆಪಾಳ್ಯ, ಅಭಿಲಾಷ್ ಕೊಡ್ಲು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ನ.20 ರಂದು ಘಟನೆ ನಡೆದಿದ್ದು, ಆದರೆ ತಡವಾಗಿ ಬೆಳಕಿಗೆ ಬಂದಿದೆ. ಬರ್ತ್ ಡೇ ಪಾರ್ಟಿಗೆ ಬಂದಿದ್ದ ಯುವಕರ ಗುಂಪಿನಿಂದ ಪುಂಟಾಟ ನಡೆದಿದೆ ಎನ್ನಲಾಗಿದೆ. ಆರ್ಡರ್ ಮಾಡಿದ್ದ ಊಟ ಕೊಡದೇ ಇದ್ದಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದೆ. ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು, ಜಗಳ ಬಿಡಿಸಲು ಬಂದ ಇತರರ ಮೇಲೂ ಹಲ್ಲೆ ನಡೆಸಲಾಗಿದೆ. ಅಲ್ಲದೇ ಪುಂಡರು ರೆಸ್ಟೋರೆಂಟ್ ನಲ್ಲಿ ಟೇಬಲ್, ಪೀಠೋಪಕರಣ ಧ್ವಂಸ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.