ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಜವಾದ್ ಸೈಕ್ಲೋನ್: ಕರ್ನಾಟಕದಲ್ಲೂ ಮೂರು ದಿನ ಮಳೆ

ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಜವಾದ್ ಸೈಕ್ಲೋನ್: ಕರ್ನಾಟಕದಲ್ಲೂ ಮೂರು ದಿನ ಮಳೆ

ಒಡಿಶಾ: ಇಂದು ಜವಾದ್ ಚಂಡಮಾರುತವು ( Cyclone Jawad ) ಒಡಿಶಾ ಹಾಗೂ ಆಂಧ್ರ ಪ್ರದೇಶದ ಕರಾವಳಿಗೆ ( North Andhra Pradesh and Odisha coast ) ಅಪ್ಪಳಿಸೋ ಸಾಧ್ಯತೆ ಇದೆ. ಹೀಗಾಗಿ ಎರಡೂ ರಾಜ್ಯಗಳಲ್ಲಿ ಕೆಟ್ಟೆಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆಯೂ ( Indian Meteorological Department -IMD ) ಮುನ್ಸೂಚನೆ ನೀಡಿದೆ.

ಈ ಕುರಿತಂತೆ ಐಎಂಡಿ ಮಾಹಿತಿ ನೀಡಿದ್ದು, ಶನಿವಾರ ಬೆಳಿಗ್ಗೆ ಒಡಿಶಾ ಹಾಗೂ ಆಂಧ್ರದ ಕರಾವಳಿಗೆ ಜವಾದ್ ಚಂಡಮಾರುತ ಅಪ್ಪಳಿಸಲಿದೆ. ಸೈಕ್ಲೋನ್ ಕಾರಣದಿಂದಾಗಿ ಭಾರೀ ಮಳೆಯಾಗಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲೂ ಭಾರೀ ಮಳೆಯಾಗುವ ( Heavy Rain ) ಸಾಧ್ಯತೆ ಇದೆ ಎಂದು ತಿಳಿಸಿದೆ.ಇನ್ನೂ ಜವಾದ್ ಚಂಡಮಾರುತದ ಪರಿಣಾಮದಿಂದಾಗಿ ಕರ್ನಾಟಕದಲ್ಲೂ ಮುಂದಿನ 72 ಗಂಟೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಐಎಂಡಿ ಸೂಚನೆ ನೀಡಿದೆ