ಅಡಿಕೆ ಕೃಷಿಕ ಹಾಗೂ ನಿವೃತ್ತ ಇಂಜಿನಿಯರ್ ಉಮೇಶ್ ಸರ್ಜಿ (62)ನಿಧನ

ಅಡಿಕೆ ಕೃಷಿಕ ಹಾಗೂ ನಿವೃತ್ತ ಇಂಜಿನಿಯರ್ ಉಮೇಶ್ ಸರ್ಜಿ (62)ನಿಧನ

ಶಿವಮೊಗ್ಗ : ಚೆನ್ನಪ್ಪ ಲೇ ಔಟ್‌ನ ನಿವಾಸಿ, ಅಡಿಕೆ ಕೃಷಿಕರು ಹಾಗೂ ನಿವೃತ್ತ ಎಂಜಿನಿಯರ್‌ ಆದ ಉಮೇಶ್‌ ಸರ್ಜಿ (62)ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ  ದೈವಾದೀನರಾದರು. 
ದೈವಾದೀನರಾದ ಉಮೇಶ್‌ ಸರ್ಜಿಅವರು  ಪತ್ನಿ ಸುಮಂಗಳಾ ಸೇರಿದಂತೆ ಪುತ್ರ ರುದ್ರದೇವ್‌, ಪುತ್ರಿ ಸುಚೇತ  ಹಾಗೂ ಸೋದರರಾದ ಸರ್ಜಿ ರುದ್ರಪ್ಪ, ಸರ್ಜಿ ಚನ್ನಬಸಪ್ಪ ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಮೂಲತ: ಚನ್ನಗಿರಿ ತಾಲೂಕು ಗೊಪ್ಪೇನಹಳ್ಳಿಯ ಇವರು ಶಿವಮೊಗ್ಗದಲ್ಲಿ ನೆಲೆಸಿದ್ದರು. ಚನ್ನಪ್ಪ ಲೇಔಟ್‌ನ ಎರಡನೇ ತಿರುವಿನ ಸ್ವಗೃಹದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆವರೆಗೆ ಪಾರ್ಥಿವ ಶರೀರದ  ದರ್ಶನಕ್ಕೆ ಅವಕಾಶ ಇದೆ. ನಂತರ ಚನ್ನಗಿರಿ ತಾಲೂಕು ದೇಗರದಹಳ್ಳಿಯ ತೋಟದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.