ಸರಕಾರದ ಆದೇಶ ಧಿಕ್ಕರಿಸಿ ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಅದ್ಧೂರಿ ಈದ ಮಿಲಾದ ಮೆರವಣಿಗೆ

ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಮುಸ್ಲೀಮ ಬಾಂಧವರಿಂದ ಅದ್ದೂರಿಯಾಗಿ ಈದ್ ಮಿಲಾದ್ ಹಬ್ಬ ಆಚರಣೆ ಮಾಡಲಾಯಿತು. ನಗರದ ಗಡಿಯಾರ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಸರಕಾರದಿಂದ ಸರಳವಾಗಿ ಈದ್ ಮಿಲಾದ್ ಆಚರಣೆಗೆ ಆದೇಶಿಸಲಾಗಿತ್ತು.ಆದರೆ, ಸರಕಾರದ ಆದೇಶ ಧಿಕ್ಕರಿಸಿ ಅದ್ಧೂರಿಯಾಗಿ ಈದ್ ಮಿಲಾದ್ ಆಚರಣೆ ಮಾಡಲಾಯಿತು. ಜನರು ಗುಂಪು ಸೇರುವುದನ್ನು ಸರಕಾರ ನಿಷೇಧಿಸಿರುವುದನ್ನು ಲೆಕ್ಕಿಸದೇ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಸರಕಾರದ ಆದೇಶದ ನಡುವೆಯೂ ಗುಂಪಾಗಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಭಾರಿ ಮೆರವಣಿಗೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಪಾಲ್ಗೊಂಡಿದ್ದರು. ಈ ವೇಳೆ ಡಿಜೆ ಹಾಡಿಗೆ ಶಾಸಕ ರಾಘವೇಂದ್ರ ಹಿಟ್ನಾಳ್ನೃತ್ಯ ಮಾಡಿದರು.ಶಾಸಕ ರಾಘವೇಂದ್ರ ಹಿಟ್ನಾಳ್ ನನ್ನು ಮುಸ್ಲಿಂ ಬಾಂಧವರು ಎತ್ತಿ ಕುಣಿದಾಡುವುದು ಸಹ ಕಂಡು ಬಂತು