ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ನೆರವೇರಿಸಿದ ಸಚಿವ ಪ್ರಭು ಚವ್ಹಾಣ್

ಗಡಿ ಜಿಲ್ಲೆ ಬೀದರ್‍ನಲ್ಲಿ ಇಂದು ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಪೆÇಲೀಸ್ ಪೇರೆಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಧ್ವಜಾರೋಹಣದ ಬಳಿಕ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕಾರ ಮಾಡಿದ ಬಳಿಕ ವಿವಿಧ ಪೆÇಲೀಸ್ ತಂಡಗಳಿಂದ ಕವಾಯತ್ತು ನಡೆಯಿತು. ಧ್ವಜಾರೋಹಣದ ವೇಳೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮಾಸ್ಕ್ ಹಾಕದೆ ಕೊವೀಡ್ ನಿಯಮಗಳ ಉಲ್ಲಂಘನೆ ಮಾಡಿದ್ರು. ಶಾಸಕ ರಹೀಂಖಾನ್, ಎಂಎಲ್ಸಿ ವಿಜಯ್ ಸಿಂಗ್,ಡಿಸಿ ರಾಮಚಂದ್ರನ್ ಆರ್, ಎಸ್ಪಿ ನಾಗೇಶ್ ಡಿಲ್ ಭಾಗಿಯಾಗಿದ್ದರು.