ಸರ್ಕಾರಕ್ಕೆ 2 ಕೋಟಿ 'ಕೋವಿಶೀಲ್ಡ್' ಡೋಸ್ ಗಳನ್ನು ಉಚಿತವಾಗಿ ನೀಡಲಿರುವ ಸೀರಮ್ ಇನ್ಸ್ಟಿಟ್ಯೂಟ್

ನವದೆಹಲಿ: ಚೀನಾ,ಅಮೆರಿಕ, ಕೊರಿಯಾ ಸೇರಿದಂತೆ ವಿದೇಶಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳವಾಗುತ್ತಿದೆ. ಇದದ ಪ್ರತಿಯಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII)ಕೇಂದ್ರ ಸರ್ಕಾರಕ್ಕೆ ಕೋವಿಶೀಲ್ಡ್ ಲಸಿಕೆ (Covishield vaccine) ಎರಡು ಕೋಟಿ ಉಚಿತ ಡೋಸ್‌ಗಳನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸೀರಮ್ ಇನ್‌ಸ್ಟಿಟ್ಯೂಟ್‌ನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು 410 ಕೋಟಿ ರೂ. ಮೌಲ್ಯದ ಡೋಸ್‌ಗಳನ್ನು ಉಚಿತವಾಗಿ ನೀಡುವುದಾಗಿ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮಕ್ಕಾಗಿ ಸೀರಮ್ ಇನ್‌ಸ್ಟಿಟ್ಯೂಟ್ (SII) 170 ಮಿಲಿಯನ್ ಡೋಸ್ ಕೋವಿಶೀಲ್ಡ್ ಅನ್ನು ಸರ್ಕಾರಕ್ಕೆ ನೀಡಿದೆ.
ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಸರ್ಕಾರವು ಎಚ್ಚರಿಕೆ ವಹಿಸಿದೆ. ಯಾವುದೇ ಸಾಧ್ಯತೆಗಾಗಿ ಯೋಜಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.
ಮೂಲಗಳ ಪ್ರಕಾರ ಜನವರಿಯಲ್ಲಿ ಭಾರತವು ಕೋವಿಡ್ ಉಲ್ಬಣವನ್ನು ಅನುಭವಿಸಬಹುದು, ಆದ್ದರಿಂದ ಮುಂದಿನ 40 ದಿನಗಳು ನಿರ್ಣಾಯಕವಾಗಿವೆ ಎಂದು ಆರೋಗ್ಯ ಇಲಾಖೆ ಜನರನ್ನು ಎಚ್ಚರಿಸಿದೆ.
ಡಿ.24 ರಿಂದ ಸರ್ಕಾರವು 2% ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಯಾದೃಚ್ಛಿಕ ಕೊಎಒನಾ ಪರೀಕ್ಷೆಯ ಕಡ್ಡಾಯಗೊಳಿಸಿದೆ