ಮಣ್ಣಿನ ಮಕ್ಕಳಾದ ಕುಮಾರಸ್ವಾಮಿ, ದೇವೇಗೌಡರಿಗೆ ಬುದ್ಧಿ ಕಲಿಸಿ

ಕೋಲಾರ  

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡ ಶಿವಾರದ ಈಶ್ವರ ಕೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಾಗಿನ ಆರ್ಪಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾತು ಮಾತಿಗೂ ದೇವೇಗೌಡರ ಕುಟುಂಬ ಮಣ್ಣಿನ ಮಕ್ಕಳು ಎಂದು ಹೇಳುತ್ತಾರೆ. ಮಣ್ಣಿನ ಮಕ್ಕಳು ಎನ್ನುವ ಅವರು ಕೆಸಿ ವ್ಯಾಲಿ ನೀರು ವಿಷಪೂರಿತ ನೀರು ಎಂದು ಯೋಜನೆಗೆ ಅಡ್ಡಿಪಡಿಸಿದ್ದರು, ನ್ಯಾಯಾಲಯದ ಮೆಟ್ಟಿಲು ಹತ್ತಲೂ ಅವರು ಪರೋಕ್ಷ ಕಾರಣವಾಗಿದ್ದರು, ನ್ಯಾಯಾಲಯದಲ್ಲಿ ನೀರು ಹರಿಸಲು ಹಸಿರು ನಿಶಾನೆ ಬಂದ ಮೇಲೆ ಈಗ ಕೆರೆಗಳು ತುಂಬಿ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಯಾಗುತ್ತಿರುವುದು ನೋಡಿದ್ದೇವೆ ಎಂದ ಅವರು ಈ ಬಾರಿ ಮಣ್ಣಿನ ಮಕ್ಕಳಿಗೆ  ಪಾಠ ಕಲಿಸಿ ಎಂದು ಜನತೆಗೆ ಕರೆ ನೀಡಿದರು. ಬಾಗಿನ ಕಾರ್ಯಕ್ರಮದಲ್ಲಿ ಶಾಸಕ ಕೆವೈ ನಂಜೇಗೌಡ, ಎಸ್.ಎನ್ ನಾರಾಯಣಸ್ವಾಮಿ, ಮಾಜಿ ಸಂಸದ ಕೆಎಚ್ ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಭಾಗಿಯಾಗಿದ್ದರು.