ಇದು ಪ್ರಜಾಪ್ರಭುತ್ವದ ಕೊಲೆ'' ; ಚುನಾವಣಾ ಆಯೋಗದ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಇದು ಪ್ರಜಾಪ್ರಭುತ್ವದ ಕೊಲೆ'' ; ಚುನಾವಣಾ ಆಯೋಗದ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ವದೆಹಲಿ : ಇಂದು ಚುನಾವಣಾ ಆಯೋಗವು ಸೇವಾ ಶಿವಾ ಸೇನೆ ಮತ್ತು ಚಿಹ್ನೆಯಾದ ಬಿಲ್ಲು-ಬಾಣವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಹಂಚಿಕೆ ಮಾಡಿ ಆದೇಶ ಹೊಡಿಸಿದೆ. ಇದಕ್ಕೆ ಮಾಜಿ ಸಿಎಂ ಉದ್ಧವ್ ಠಾಕ್ರೆಯವರ ಪ್ರತಿಕ್ರಿಯಿಸಿದ್ದು, ವಾಗ್ದಾಳಿ ನಡೆಸಿದೆ.

ಚುನಾವಣಾ ಆಯೋಗವು ಪಕ್ಷದ ಹೆಸರು 'ಶಿವಸೇನೆ' ಮತ್ತು ಪಕ್ಷದ ಚಿಹ್ನೆ 'ಬಿಲ್ಲು ಮತ್ತು ಬಾಣ' ವನ್ನು ಏಕನಾಥ್ ಶಿಂಧೆ ಬಣಕ್ಕೆ ಉಳಿಸಿಕೊಳ್ಳಲು ಆದೇಶಿಸಿದೆ. ಈ ಆದೇಶದ ವಿರುದ್ಧ ಮಾಜಿ ಸಿಎಂ ಉದ್ಧವ್ ಠಾಕ್ರೆಯವರು ಗುಡುಗಿದ್ದು, ಚುನಾವಣಾ ಆಯೋಗದ ಆದೇಶವು ಪ್ರಜಾಪ್ರಭುತ್ವದ ಕೊಲೆ ಎಂದು ವಾಗ್ದಾಳಿ ನಡೆಸಿದ್ದಾರೆ.ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಶಿಂಧೆ ಅವರು 40 ಕ್ಕೂ ಹೆಚ್ಚು ಸೇನಾ ಶಾಸಕರೊಂದಿಗೆ ಬಂಡಾಯವೆದ್ದು, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗಿನ ಠಾಕ್ರೆಯವರ ಮೈತ್ರಿ ಸರ್ಕಾರದಿಂದ ಪಕ್ಷದ ನಿಯಂತ್ರಣವನ್ನು ವಶಪಡಿಸಿಕೊಂಡ ಸುಮಾರು ಎಂಟು ತಿಂಗಳ ನಂತರ ಚುನಾವಣಾ ಆಯೋಗದ ನಿರ್ಧಾರವು ಬಂದಿದೆ