ಮನೆ ಕಟ್ಟಿಲ್ಲವೆಂದು 'ಸೈಟ್' ವಾಪಸ್ ಪಡೆದ ಪಂಚಾಯಿತಿಗೆ 1 ಲಕ್ಷ ದಂಡ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಮೃತ ವ್ಯಕ್ತಿಯ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಗ್ರಾ.ಪಂ ಗೆ 1 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಯಲಹಂಕದಲ್ಲಿ ಈ ಘಟನೆ ನಡೆದಿದ್ದು, ಮೃತನ ಪತ್ನಿಗೆ ಮನೆ ಸಹಿತ ನಿವೇಶನವನ್ನು ಹೈಕೋರ್ಟ್ ಕೊಡಿಸಿದೆ.
ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಕ್ರಮ ಪ್ರಶ್ನಿಸಿ ಮೃತ ಕಾರ್ಮಿಕ ನರಸಿಂಹಯ್ಯನವರ ಪತ್ನಿ ನಾಗಮ್ಮ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತರಾಟೆಯ ನಂತರ ಪಂಚಾಯಿತಿ ಮನೆ ಸಹಿತ ನಿವೇಶನ ನೀಡಿದೆ. ಮೃತರ ಪತ್ನಿ ದಂಡದ ಹಣ ನೀಡಲು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದೆ. ಪರಿಹಾರ ರೂಪದಲ್ಲಿ ಪತ್ನಿಗೆ ನಿವೇಶನ ನೀಡುವಂತೆ ಹೈಕೋರ್ಟ್ ಗ್ರಾಮ ಪಂಚಾಯತ್ ಗೆ ಸೂಚನೆ ನೀಡಿತ್ತು. ಬಳಿಕ ಪಂಚಾಯಿತಿ ಕೂಡ ನಿವೇಶನ ನೀಡಿತ್ತು. ಆದರೆ, ಮನೆ ಕಟ್ಟಿಲ್ಲವೆಂದು ಪಂಚಾಯತಿ ನಿವೇಶನ ಹಿಂಪಡೆದಿತ್ತು, ಈ ಹಿನ್ನೆಲೆ ನರಸಿಂಹಯ್ಯ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಗ್ರಾ.ಪಂ ಗೆ 1 ಲಕ್ಷ ದಂಡ ವಿಧಿಸಿ ವಾಪಸ್ ನಿವೇಶನ ನೀಡುವಂತೆ ಆದೇಶ ಹೊರಡಿಸಿದೆ.