ಬಿಬಿಎಂಪಿ ಶಾಲೆಗಳಲ್ಲಿ ನೂರರಷ್ಟು ಫಲಿತಾಂಶ ಬಂದರೆ ಶಿಕ್ಷಕರಿಗೆ ವಿದೇಶ ಪ್ರವಾಸ

ಬಿಬಿಎಂಪಿ ಶಾಲೆಗಳಲ್ಲಿ ನೂರರಷ್ಟು ಫಲಿತಾಂಶ ಬಂದರೆ ಶಿಕ್ಷಕರಿಗೆ ವಿದೇಶ ಪ್ರವಾಸ

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಹೆಚ್ಚಾದರೆ ಅಯಾ ಮುಖ್ಯ ಶಿಕ್ಷಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತದೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಡಾ. ವಿ. ರಾಮಪ್ರಸಾತ್‌ ಮನೋಹರ್‌ ತಿಳಿದ್ದಾರೆ.

'ಫಲಿತಾಂಶವನ್ನು ವೃದ್ಧಿಸಲು ಬಳ್ಳಾರಿಯಲ್ಲಿಯೂ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

70ರಿಂದ 80 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದವು. ಒಂದು ವರ್ಷದ ನಂತರ ಇಲ್ಲಿಯೂ ಶಿಕ್ಷಕರಿಗೂ ಶೈಕ್ಷಣಿಕ ಪ್ರವಾಸದಂತಹ ಕೊಡುಗೆಗಳನ್ನು ನೀಡುವ ಯೋಜನೆ ಇದೆ' ಎಂದರು.

'ನಮ್ಮ ಶಿಕ್ಷಕರು ನಿಯಮಿತ ಸಂಪನ್ಮೂಲಗಳಲ್ಲೇ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಅವರಿಗೆ ಮತ್ತಷ್ಟು ಉತ್ತೇಜನ ಸಿಗಲಿದ್ದು, ಇದರಿಂದ ಮಕ್ಕಳಿಗೆ ಹೆಚ್ಚು ಸಹಾಯವಾಗಲಿದೆ'
ಎಂದರು.

ಈ ಯೋಜನೆಯ ರೂಪುರೇಷೆಯನ್ನು ಅಧಿಕಾರಿಗಳು ರೂಪಿಸುತ್ತಿದ್ದಾರೆ. ಇದೆಲ್ಲ ಅಂತಿಮಗೊಂಡ ಮೇಲೆ ಉನ್ನತ ಅಧಿಕಾರಿಗಳಿಗೆ ಕಳುಹಿಸಿ, ಅವರ ಅನುಮತಿ ಸಿಕ್ಕ ಮೇಲೆ ಪ್ರಕಟಿಸಲಾಗುತ್ತದೆ. ಈ ಯೋಜನೆಗೆ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿ ಉಪಯೋಗಿಸಿಕೊಳ್ಳಲು ಯೋಚಿಸಲಾಗುತ್ತಿದೆ' ಎಂದು ಹೇಳಿದರು.

'ಕೊಡುಗೆಗಳಿಂತ ಮುಖ್ಯವಾಗಿ ಬಿಬಿಎಂಪಿ ಶಾಲೆಗಳಲ್ಲಿನ ಮೂಲಸೌಕರ್ಯವನ್ನು ಉನ್ನತೀಕರಿಸಬೇಕು. ಕೆಲವು ಶಾಲೆಗಳಲ್ಲಿ ಅಗತ್ಯ ಸೌಕರ್ಯಗಳೇ ಇಲ್ಲ. ಶಿಕ್ಷಕರನ್ನು ಉತ್ತೇಜಿಸಬೇಕು ಎಂಬುದೇನೋ ನಿಜ. ಆದರೆ, ಹಲವು ಶಾಲೆಗಳಲ್ಲಿ ಹಾಜರಾತಿ, ನೋಂದಣಿಯನ್ನು ಹೆಚ್ಚಿಸಬೇಕಿದೆ. ಹೀಗಾಗಿ ಹಣವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳಬೇಕು' ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು