ತಾಲೂಕಾ ಆಡಳಿತಕ್ಕೆ ತರಾಟೆ ತೆಗೆದುಕೊಂಡ ಮಾಜಿ ಶಾಸಕ

ಆಮಂತ್ರಣ ಪತ್ರದ ವಿಚಾರದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ತಾಲೂಕಾಡಳಿತವನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬಸವಕಲ್ಯಾಣದ ಥೆರ್ ಮೈದಾನದಲ್ಲಿರುವ ಬಿಕೆಡಿಬಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಶಾಸಕರಿಗೆ, ಸ್ಥಳೀಯ ಕನ್ನಡ ಪರ ಸಂಘಟನೆಯ ಮುಖಂಡರಿಗೆ, ಸ್ಥಳೀಯ ಯಾವುದೇ ರಾಜಕೀಯ ಪಕ್ಷಗಳ ಮುಖಂಡರಿಗೆ ಆಮಂತ್ರಣ ಪತ್ರ ಕೊಡುತ್ತಿಲ್ಲ ಎಂದು ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ವೇದಿಕೆಯಲ್ಲಿ ಶಾಸಕ ಶರಣು ಸಲಗರ್, ನಗರಸಭೆ ಅಧ್ಯಕ್ಷ ನಾಹೀದಾ ಸುಲ್ತಾನ್, ಸಹಾಯಕ ಆಯುಕ್ತ ಪಾಟೀಲ್ ಭುವನೇಶ ದೇವಿದಾಸ್, ತಹಶಿಲ್ದಾರ ಸಾವಿತ್ರಿ ಸಲಗರ್, ತಾಪಂ ಇಓ ಬಿರೇಂದ್ರಸಿಂಗ್ ಠಾಕೂರ್, ನಗರಸಭೆ ಪೌರಾಯುಕ್ತ ಶಿವಕುಮಾರ ಉಪಸ್ಥಿತರಿದ್ದರು.