ಭೂ ಕುಸಿತ: ನಾಳೆ ಕೆಆರ್ಎಸ್ನಲ್ಲಿ ಸಿಎಂ ಜೊತೆ ಚರ್ಚೆ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆ ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭೂ ಕುಸಿತವಾಗಿರುವ ಸ್ಥಳವನ್ನು ಕೂಲಂಕುಷವಾಗಿ ಪರಿಶೀಲಿಸಿದದರು. ಈ ವೇಳೆ ಮಾತನಾಡಿ, ಚಾಮುಂಡಿ ಬೆಟ್ಟದ ಅಪಾಯಕಾರಿ ಸ್ಥಳಗಳಲ್ಲಿ ಭೂ ಕುಸಿತ ಆಗದಂತೆ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಈ ಸಂಬಂಧ ನಾಳೆ ಕೆಆರ್ಎಸ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ಮೈಸೂರು ಜಿಲ್ಲೆಯ 11 ಶಾಸಕರನ್ನು ನಾಳೆ ಕೆ ಆರ್ ಎಸ್ ಗೆ ಬರಲು ಹೇಳಿದ್ದೇನೆ. ಅವರು ತಮ್ಮ ಕ್ಷೇತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು. ಸಚಿವ ಸೋಮಶೇಖರ್ ಗೆ ಸ್ಥಳೀಯ ಶಾಸಕ ಜಿ ಟಿ ದೇವೇಗೌಡ, ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್, ಆಯುಕ್ತ ನಟೇಶ್ ಹಾಗೂ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.