ಹಣ ಪಾವತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ರೈತ ಸಂಘದಿಂದ ಆಹೋರಾತ್ರಿ ಧರಣಿ... | Bidar |
ರೈತರಿಗೆ ಹಣ ಪಾವತಿಸುವಂತೆ ಸರ್ಕಾರಿ ಕಾರ್ಖಾನೆಗಳಿಗೆ ಆದೇಶಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ರೈತ ಸಂಘವು ರೈತ ಸಂಫದ ಕಾರ್ಯದರ್ಶಿ ಶ್ರೀಕಾಂತ ಬೀದರಾದ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ನಡೆಸಿತು. ಆ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಎಲ್ಲರ ಗಣ್ಯರ ಸಮ್ಮುಖದಲ್ಲಿ ಪ್ರತಿ ಟನ್ ಗೆ 2400 ರೂ. ನೀಡುವುದಾಗಿ ನಿರ್ಣಯ ಮಾಡಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಆದರೆ ರೈತರು ಕಬ್ಬು ಸಾಗಿಸಿದ ಮೇಲೆ ರೈತರಿಗೆ ಕೇವಲ 1950 ರೂ ಮಾತ್ರ ಪಾವತಿ ಮಾಡಿ, ಉಳಿದ 450 ರೂ. ನೀಡದೆ ಮಾತಿಗೆ ತಪ್ಪಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ದೂರಿದರು. ಕೊಟ್ಟ ಮಾತಿನಂತೆ ನಮ್ಮ ಹಣ ನಮಗೆ ಕೊಡುವಂತೆ ರೈತರು ಹಲವು ಬಾರಿ ಸರ್ಕಾರಕ್ಕೆ ಹಾಗೂ ಕಾರ್ಖಾನೆ ನಿರ್ದೇಶಕರಿಗೆ ಮನವಿ ಮಾಡಿದರೂ ರೈತರ ಮಾತಿಗೆ ಕೌಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದರು..