ಶಾಸಕರ ನಿವಾಸದಲ್ಲಿ 8 ಕೋಟಿ ಸಿಕ್ಕರು ಬಂಧಿಸಿಲ್ಲ ಏಕೆ.? - ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನೆ

ಶಾಸಕರ ನಿವಾಸದಲ್ಲಿ 8 ಕೋಟಿ ಸಿಕ್ಕರು ಬಂಧಿಸಿಲ್ಲ ಏಕೆ.? - ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನೆ

ದಾವಣಗೆರೆ: ದೆಹಲಿಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ನಿವಾಸದಲ್ಲಿ ಕೇವಲ 10 ಸಾವಿರ ಸಿಕ್ಕಿದ್ದಕ್ಕೆ ಬಂಧಿಸಲಾಗಿದೆ. ಅದೇ ಕರ್ನಾಟಕದ ಶಾಸಕರ ನಿವಾಸದಲ್ಲಿ 8 ಕೋಟಿ ಸಿಕ್ಕಿದೆ. ಯಾಕೆ ಇನ್ನೂ ಅವರನ್ನು ಬಂಧಿಸಿಲ್ಲ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದಂತ ಆಪ್ ಸಮಾವೇಶದಲ್ಲಿ ಮಾತನಾಡಿದಂತ ಅವರು, ಕರ್ನಾಟಕದ ಜನರು ದೇಶಭಕ್ತರು, ಕಷ್ಟಪಡುವವರು. ಆದರೇ ರಾಜ್ಯದಲ್ಲಿರುವ ನಾಯಕರು ಕೆಟ್ಟವರು, ಇದು 40% ಸರ್ಕಾರ ಎಂಬುದಾಗಿ ಕಿಡಿಕಾರಿದರು.

ಅಮಿತ್ ಶಾ ಕರ್ನಾಟಕಕ್ಕೆ ಬಂದು ದೊಡ್ಡ ದೊಡ್ಡ ಮಾತನಾಡುತ್ತಾರೆ. 8 ಕೋಟಿ ಸಮೇತ ಈ ಜಿಲ್ಲೆಯ ನಾಯಕರೊಬ್ಬರ ಪುತ್ರ ಸಿಕ್ಕಿದ್ದಾನೆ. ಮುಂದಿನ ವರ್ಷ ಇವನಿಗೆ ಪದ್ಮಭೂಷಣ ಪ್ರಶಸ್ತಿ ಕೊಡುತ್ತಾರೆ ನೋಡಿ ಎಂಬುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದರು.