ಕೋಲಾರದಲ್ಲಿ ಬೀಕರ ಸರಣಿ ಅಪಘಾತದಿಂದ ತಂದೆ ಮಗಳು ಸೇರಿ ಮೂರು ಜನ ಸಾವು, ಸಾಲ್ವರಿಗೆ ಗಂಭೀರ ಗಾಯ

ಕೋಲಾರಲ್ಲಿ ಕೆಎಸ್‌ಆರ್‌ಟಿಸಿ ಬಸ್, ಟಾಟಾ ಏಸ್ ವಾಹನ ಹಾಗೂ ದ್ವಚಕ್ರ ವಾಹನ ನಡುವೆ ಭೀಕರ ಸರಣಿ ಅಪಘಾತ ನಡೆದು ತಂದೆ ಮಗಳು ಸೇರಿ ೩ ಜನ ಸಾವನ್ನಪ್ಪಿದ್ದು ನಾಲ್ಕು ಮಂದಿಗೆ ಗಂಭೀರ ಗಾಯವಾಗಿದೆ. ತಾಲೂಕಿನ ಚಿಂತಾಮಣಿ ರಸ್ತೆಯಲ್ಲಿರುವ ಶೆಟ್ಟಿ ಮಾದಮಂಗಳ ಗೇಟ್ ಬಳಿ ಘಟನೆ ಜರುಗಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ತಂದೆ ಹಾಗೂ ೬ ವರ್ಷದ ಮಗಳು ಜೀವ ಕಳೆದುಕೊಂಡಿದ್ದಾರೆ. ಮೃತರನ್ನು ಕೋಲಾರ ಹೊರವಲಯದ ಕೋಗೊಲುಹಳ್ಳಿ ನಿವಾಸಿಗಳಾದ ರಾಜು (೪೬), ಮಗಳು ಬಿಂದು(೭) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಸೇರಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಪ್ತಿಯಲ್ಲಿ ಪ್ರಕರಣ ನಡೆದಿದೆ.