ಪಕ್ಷಾತೀತವಾಗಿ ಮೂರ್ತಿ ಅನಾವರಣ ಕಾರ್ಯ ನಡೆಸೋಣ

ಶಿಗ್ಗಾಂವಿ ಪಟ್ಟಣದ ಚನ್ನಪ್ಪ ಕುನ್ನುರ್ ಪದವಿಪೂರ್ವ ಕಾಲೇಜಿನಲ್ಲಿ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಮಾಜಿ ಸಂಸದರು ಮಂಜುನಾಥ ಕುನ್ನೂರ ಮಾತನಾಡಿ, ಬ್ರಿಟಿಷರನ್ನು ಎದುರಿಸಿದ ಮೊಟ್ಟ ಮೊದಲ ಮಹಿಳಾ ಕಿತ್ತೂರು ರಾಣಿ ಚೆನ್ನಮ್ಮನವರ ಮೂರ್ತಿ ಅನಾವರಣವನ್ನು ಎಲ್ಲರೂ ಪಕ್ಷಾತೀತವಾಗಿ ಮತ್ತು ಎಲ್ಲ ಸಮುದಾಯದ ಕೂಡಿಕೊಂಡು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎರಡು ಪೀಠದ ಶ್ರೀಗಳನ್ನು ಕರೆಸಿಕೊಂಡು ಮೂರ್ತಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಮಾಜಿ ಸಂಸದರು ಮಂಜುನಾಥ್ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಾನಂದ ಬಾಗೂರು, ಹಿರಿಯರಾದ ಬಸನಗೌಡ ದೊಡಗೌಡರ, ಸಿದ್ದಣ್ಣ ಮೊರಬದ, ಶಶಿಧರ್ ಯಲಿಗಾರ, ಏಫ್ ಸಿ ಪಾಟೀಲ್, ಪಾಲಕ್ಷಪ್ಪ ಹಾವಣಗಿ, ಪಕ್ಕೀರಪ್ಪ ಕುಂದೂರ, ಅಶೋಕ ಕಾಳೆ, ಬಸಲಿಂಗಪ್ಪ ನರಗುಂದ, ಉಮೇಶ ಗೌಳಿ, ರಾಜಣ್ಣ ಮಾಮ್ಲೇದೇಸಾಯಿ, ಸಂಗಪ್ಪ ಉಳ್ಳಾಗಡ್ಡಿ, ಟಾಕನಗೌಡ್ರ ಪಾಟೀಲ, ನಾಗರಾಜ ಹಾವೇರಿ, ನಿಂಗಣ್ಣ ಜವಳಿ, ಈರಣ್ಣ ನವಲಗುಂದ, ಸಂಜೀವ ಮಣ್ಣಣ್ಣವರ, ಎಂ.ಬಿ.ಹಳೆಮನಿ, ಮಂಜುನಾಥ ವಳಗೇರಿ, ಹಲವಾರು ಸಮಾಜದ ಮುಖಂಡರು ಉಪಸ್ಥಿತರಿದ್ದರು.