ರಝಾ ಟೌನ್ ನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಅಬ್ಬಯ್ಯ ಚಾಲನೆ
ಹುಬ್ಬಳ್ಳಿಯ ಫತೇಹಾ ಖವಾನಿ ಗಾರ್ಡನ್ ಸಮೀಪದ ರಝಾ ಟೌನ್ ನಲ್ಲಿ, ಸಿಸಿ ರಸ್ತೆ ನಿರ್ಮಾಣ
ಕಾಮಗಾರಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು.ಈ ವೇಳೆ, ಪಾಲಿಕೆ ಸದಸ್ಯ ನಜೀರ್ ಹೊನ್ಯಾಳ್, ಇ-ಅರಾಕಿನ್ ಜಮಾತ್ ನ ಮುತುವಲ್ಲಿ, ವಲಯ ಕಚೇರಿ ಆಯುಕ್ತ ಲಮಾಣಿ, ಜೆ.ಇ. ನಿಖಿತಾ, ದಾದಾಪೀರ್ ಕಲಗೆ, ರಝಾ ಟೌನ್ ನ ನಿವಾಸಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.