ಬಂಕಾಪುರದ ಅರಳಲೇ ಮಠದ ರೇವಣಸಿದ್ದೇಶ್ವರ ಸ್ವಾಮೀಜಿಗೆ ಜನ್ಮದಿನ ಗೋದಾನ
ಬಂಕಾಪುರದ ಅರಳೆ ಅರಳಲೇ ಮಠದ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ ದಿನಾಚರಣೆ ಅಂಗವಾಗಿ ತಾಲೂಕಿನ ಗಂಗಿಬಾವಿ ಸಿಬಿ ಎಲಿಗಾರ್ ಸೇವಾಸಂಸ್ಥೆಯ ಗೋಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಶಶಿಧರ್ ಎಲಿಗಾರ್ ದಂಪತಿ ಗುರುವಾರ ಶ್ರೀಗಳಿಗೆ ಗೋದಾನ ನೀಡಿ ಸನ್ಮಾನಿಸಿದರು. ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ತಮ್ಮ ಜನ್ಮ ದಿನ ಆಚರಿಸಿಕೊಂಡರೆ ಅವರ ಶಿಷ್ಯ ಶಶಿಧರ್ ಎಲಿಗಾರ್ ಗುರುವಿಗೆ ಗುರು ಜನ್ಮದಿನದ ಶುಭಾಶಯ ಕೋರಿದ ಸಮಾರಂಭ ಗಮನಸೆಳೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ ಸತ್ತ ತಾಯಿಗಿಂತಲು ಗೋಮಾತೆ ಮಿಗಿಲಾದವಳು. ಹೆತ್ತ ತಾಯಿ ತನ್ನ ಮಗುವಿಗೆ ವರ್ಷವಷ್ಟೇ ಎದೆ ಹಾಲುಣಿಸಿದರೆ ಗೋಮಾತೆ ಬದುಕಿರುವವರೆಗೂ ಹಾಲುಣಿಸುವ ಕರುಣಾಮಯಿ. ಹೀಗಾಗಿ ಪ್ರತಿಯೊಬ್ಬ ಮನುಷ್ಯ ತನ್ನ ಹೆತ್ತ ತಾಯಿ ಆಶ್ರಯದಾತ ಭೂತಾಯಿ ಮತ್ತು ಬದುಕಿನ ಉದ್ದಕ್ಕೂ ಹಾಲುಣಿಸಿ ಪೂಜಿಸುವ ಗೋಮಾತೆಗೆ ವಿಶೇಷವಾಗಿ ಗೌರವಿಸಿ ಆರಾಧಿಸಬೇಕು ಎಂದರು. ಈ ಸಂದರ್ಭದಲ್ಲಿ ಶಶಿಧರ ಯಲಿಗಾರ, ಬಸವಣ್ಣೇಪ್ಪ ಬನ್ನಿಕಲ್ಲ, ನೀಲಮ್ಮ ಬನ್ನಿಕಲ್ಲ, ಸುನೀತಾ ಯಲಿಗಾರ, ಆಕಾಶ ಯಲಿಗಾರ, ಆದ್ಯಾ ಯಲಿಗಾರ, ಬಸವರಾಜ ಕುರಗೋಡಿ, ನಾಗರಾಜ ಸೂರಗೊಂಡ, ಅಕ್ಷಯ ಜೋಶಿ, ಉಪಸ್ಥಿತರಿದ್ದರು.